Asianet Suvarna News Asianet Suvarna News

ಬ್ಯಾಟಿಂಗ್‌ ನಿಲ್ಲಿಸಿ ಬಾಂಗ್ಲಾಕ್ಕೆ ಫೀಲ್ಡಿಂಗ್‌ ಸಲಹೆ ಕೊಟ್ಟ ಧೋನಿ..!

ಟೀಂ ಇಂಡಿಯಾ ಮಾಜಿ ನಾಯಕ ಧೋನಿ ತಮ್ಮ ಬ್ಯಾಟಿಂಗ್ ನಡುವೆಯೇ ಬಾಂಗ್ಲಾ ಕ್ರಿಕೆಟಿಗರಿಗೆ ಫೀಲ್ಡಿಂಗ್ ಹೇಳಿಕೊಟ್ಟ ಅಚ್ಚರಿಯ ಘಟನೆಗೆ ಕಾರ್ಡಿರ್ಫ್‌ನ ಸೋಫಿಯಾ ಗಾರ್ಡನ್ ಮೈದಾನ ಸಾಕ್ಷಿಯಾಯಿತು. ಏನಿದು ಸ್ಟೋರಿ ನೀವೇ ನೋಡಿ.. 

Dhoni Stops Bangladeshi Bowler Midway To Set Their Fielding
Author
Cardiff, First Published May 30, 2019, 10:49 AM IST

ಕಾರ್ಡಿಫ್‌[ಮೇ.30]: ಎಂ.ಎಸ್‌.ಧೋನಿ ನಾಯಕತ್ವ ತ್ಯಜಿಸಿದರೂ ಅವರೊಳಗಿರುವ ನಾಯಕ ಮಾತ್ರ ಸದಾ ಜಾಗೃತನಾಗಿರುತ್ತಾನೆ. ಮಂಗಳವಾರ ಇಲ್ಲಿ ನಡೆದ ಅಭ್ಯಾಸ ಪಂದ್ಯದ ವೇಳೆ ಬ್ಯಾಟಿಂಗ್‌ ನಿಲ್ಲಿಸಿ ಬಾಂಗ್ಲಾದೇಶದ ಬೌಲರ್‌ ಸಬ್ಬೀರ್‌ ರಹಮಾನ್‌ಗೆ ಫೀಲ್ಡರ್‌ನ ಕ್ಷೇತ್ರ ಬದಲಿಸುವಂತೆ ಸಲಹೆ ನೀಡಿದರು. 

ಅಷ್ಟಕ್ಕೂ ಆಗಿದ್ದೇನು..?

ಇನ್ನಿಂಗ್ಸ್‌ನ 40ನೇ ಓವರ್‌ ವೇಳೆ ಬಾಂಗ್ಲಾ ಫೀಲ್ಡರ್‌ ಶಾರ್ಟ್‌ ಮಿಡ್‌ ವಿಕೆಟ್‌ನಲ್ಲಿ ಫೀಲ್ಡಿಂಗ್‌ ಮಾಡುತ್ತಿದ್ದರು. ಆ ಕ್ಷೇತ್ರದಲ್ಲಿ ಫೀಲ್ಡಿಂಗ್‌ ಮಾಡುವುದು ಅನಗತ್ಯ ಎನ್ನುವುದನ್ನು ಮನಗಂಡ ಧೋನಿ ಬ್ಯಾಟಿಂಗ್‌ ನಿಲ್ಲಿಸಿ, ಸಬ್ಬೀರ್‌ಗೆ ಫೀಲ್ಡರ್‌ನನ್ನು ಸ್ಕ್ವೇರ್ ಲೆಗ್‌ಗೆ ಕಳುಹಿಸುವಂತೆ ಸೂಚಿಸಿದರು. ಧೋನಿಯ ಸಲಹೆಗೆ ಕಿವಿಕೊಟ್ಟ ಸಬ್ಬೀರ್‌ ಫೀಲ್ಡಿಂಗ್‌ನಲ್ಲಿ ಬದಲಾವಣೆ ಮಾಡಿದರು. ಸಾಮಾಜಿಕ ತಾಣಗಳಲ್ಲಿ ಈ ವಿಡಿಯೋ ವೈರಲ್‌ ಆಗಿದ್ದು, ಧೋನಿ ವಿಶ್ವ ನಾಯಕ ಎಂದು ಅಭಿಮಾನಿಗಳು ಹೊಗಳಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಎರಡನೇ ಅಭ್ಯಾಸ ಪಂದ್ಯದಲ್ಲಿ ಧೋನಿ ಭರ್ಜರಿ ಶತಕ ಸಿಡಿಸುವ ಮೂಲಕ ಮಿಂಚಿದರು. ಈ ಪಂದ್ಯವನ್ನು ಟೀಂ ಇಂಡಿಯಾ 95 ರನ್ ಗಳಿಂದ ಗೆದ್ದುಕೊಂಡಿತ್ತು. ಧೋನಿ 8 ಬೌಂಡರಿ 7 ಸಿಕ್ಸರ್ ನೆರವಿನಿಂದ ಭರ್ಜರಿ ಶತಕ ಸಿಡಿಸಿದರು. ಭಾರತ ವಿಶ್ವಕಪ್ ಟೂರ್ನಿಯಲ್ಲಿ ಜೂನ್ 05ರಂದು ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. 
 

Follow Us:
Download App:
  • android
  • ios