ಈಗಾಗಲೇ ಇಂಡಿಯಾ ಎ ಸರಣಿಗಳಲ್ಲಿ ಧೋನಿಗೆ ಪರ್ಯಾಯ ವಿಕೆಟ್ ಕೀಪರ್'ಗಳನ್ನು ಹುಡುಕುತ್ತಿದ್ದರೂ, 2019ರ ವಿಶ್ವಕಪ್'ನ ಬಳಿಕವಷ್ಟೇ ಈ ಬಗ್ಗೆ ಯೋಚಿಸಲಾಗುವುದು ಎಂದು ಪ್ರಸಾದ್ ಹೇಳಿದ್ದಾರೆ.

ನವದೆಹಲಿ(ಡಿ.26): ಧೋನಿ ನಿಜಕ್ಕೂ ಆಟದಲ್ಲಿ ಪ್ರಬುದ್ಧತೆ ಕಂಡಿದ್ದಾರೆ. ಅದರಲ್ಲೂ ವಿಕೆಟ್ ಹಿಂದೆ ಧೋನಿ ಅದ್ಭುತ ಆಟಗಾರರಾಗಿದ್ದಾರೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ. ಪ್ರಸಾದ್ ಧೋನಿ ಅವರ ಸಾಮರ್ಥ್ಯವನ್ನು ಪ್ರಶಂಸಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸದ್ದಿಲ್ಲದೇ ಆಟದ ದಿಕ್ಕನ್ನು ಬದಲಿಸುವ ಧೋನಿ ನಾಯಕತ್ವದಲ್ಲಿ ಭಾರತ 2 ವಿಶ್ವಕಪ್ ಜಯಿಸಿದೆ. ಅಲ್ಲದೇ ಧೋನಿ ಅವರನ್ನು 2019ರ ವಿಶ್ವಕಪ್'ವರೆಗೂ ಧೋನಿ ಭಾರತ ತಂಡದಲ್ಲಿ ಆಡಲಿದ್ದಾರೆ. ಧೋನಿ ಸ್ಥಾನ ತುಂಬಬಲ್ಲ ವಿಕೆಟ್ ಕೀಪರ್‌'ಗಾಗಿ ಹುಡುಕಾಟ ನಡೆಸುತ್ತಿದ್ದೂ, ಆದರೆ ಧೋನಿಯಷ್ಟು ಯಾರೂ ಸಮರ್ಥರಾಗಿಲ್ಲ. ಅಲ್ಲದೇ ಧೋನಿ ಈಗಲೂ ನಂ.1 ವಿಕೆಟ್ ಕೀಪರ್ ಎನ್ನುವುದಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪ್ರಸಾದ್ ಹೇಳಿದ್ದಾರೆ.

ಧೋನಿ ಭಾರತ ತಂಡದಲ್ಲಿ ಆಡುವಾಗ ಮಾತ್ರ ಸಮರ್ಥ ಆಟಗಾರ ಎನಿಸಿಲ್ಲ. ಎಲ್ಲ ಮಾದರಿಯಲ್ಲಿ ಆಡುವಾಗಲೂ ಧೋನಿ ಪ್ರಭಾವಿ ಆಟಗಾರರಾಗಿದ್ದಾರೆ. ಈಗಾಗಲೇ ಇಂಡಿಯಾ ಎ ಸರಣಿಗಳಲ್ಲಿ ಧೋನಿಗೆ ಪರ್ಯಾಯ ವಿಕೆಟ್ ಕೀಪರ್'ಗಳನ್ನು ಹುಡುಕುತ್ತಿದ್ದರೂ, 2019ರ ವಿಶ್ವಕಪ್'ನ ಬಳಿಕವಷ್ಟೇ ಈ ಬಗ್ಗೆ ಯೋಚಿಸಲಾಗುವುದು ಎಂದು ಪ್ರಸಾದ್ ಹೇಳಿದ್ದಾರೆ.