ಆಸ್ಟ್ರೇಲಿಯಾ ವಿರುದ್ಧ ಧರ್ಮಶಾಲಾ ಟೆಸ್ಟ್ ವೇಳೆ ಗಾಯಾಳು ವಿರಾಟ್ ಬದಲಿಗೆ ಕುಲ್ದೀಪ್ ಯಾದವ್ ಅವರನ್ನು ಆಡಿಸುವ ನಿರ್ಧಾರವನ್ನು ಕುಂಬ್ಳೆ ತೆಗೆದುಕೊಂಡಿದ್ದರು, ಆದರೆ ಈ ಬಗ್ಗೆ ಕೊಹ್ಲಿಗೆ ಮಾಹಿತಿಯೇ ಇರಲಿಲ್ಲ. ಕೋಚ್ ನಿರ್ಧಾರ, ಕೊಹ್ಲಿಗೆ ಅಚ್ಚರಿ ಮೂಡಿಸಿತ್ತು ಎನ್ನಲಾಗಿದೆ.

ನವದೆಹಲಿ(ಮೇ.31): ಬಿಸಿಸಿಐ ಭಾರತ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ಹೊಸದಾಗಿ ಅರ್ಜಿಗಳನ್ನು ಆಹ್ವಾನಿಸಲು ವಿರಾಟ್ ಕೊಹ್ಲಿ ಕಾರಣ ಎಂದು ಮೂಲಗಳು ತಿಳಿಸಿವೆ. ಹಾಲಿ ಕೋಚ್ ಅನಿಲ್ ಕುಂಬ್ಳೆ ಜತೆ ಕೆಲಸ ಮಾಡಲು ಕೊಹ್ಲಿಗೆ ಕಷ್ಟವಾಗುತ್ತಿದೆ. ಯಾವುದೇ ನಿರ್ಧಾರ ಕೈಗೊಳ್ಳಬೇಕಿದ್ದರೂ ಕುಂಬ್ಳೆ, ಕೊಹ್ಲಿಯ ಸಲಹೆಯನ್ನು ಪರಿಗಣಿಸುವುದಿಲ್ಲ ಎಂದು ಹೇಳಲಾಗಿದೆ. ಆಸ್ಟ್ರೇಲಿಯಾ ವಿರುದ್ಧ ಧರ್ಮಶಾಲಾ ಟೆಸ್ಟ್ ವೇಳೆ ಗಾಯಾಳು ವಿರಾಟ್ ಬದಲಿಗೆ ಕುಲ್ದೀಪ್ ಯಾದವ್ ಅವರನ್ನು ಆಡಿಸುವ ನಿರ್ಧಾರವನ್ನು ಕುಂಬ್ಳೆ ತೆಗೆದುಕೊಂಡಿದ್ದರು, ಆದರೆ ಈ ಬಗ್ಗೆ ಕೊಹ್ಲಿಗೆ ಮಾಹಿತಿಯೇ ಇರಲಿಲ್ಲ. ಕೋಚ್ ನಿರ್ಧಾರ, ಕೊಹ್ಲಿಗೆ ಅಚ್ಚರಿ ಮೂಡಿಸಿತ್ತು ಎನ್ನಲಾಗಿದೆ. ಮತ್ತೊಂದೆಡೆ, ಕುಂಬ್ಳೆ ಹಾಗೂ ಕೊಹ್ಲಿ ನಡುವೆ ಬಿಸಿಸಿಐ ಸಲಹಾ ಸಮಿತಿ ಸದಸ್ಯರಾದ ಸಚಿನ್, ಗಂಗೂಲಿ ಹಾಗೂ ಲಕ್ಷ್ಮಣ್ ಸಂಧಾನ ನಡೆಸಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred