ಚೆನ್ನೈ(ಮೇ.13): ಆಸ್ಪ್ರೇಲಿಯಾದ ಮಾಜಿ ಕ್ರಿಕೆಟಿಗ, ದಿಗ್ಗಜ ಬ್ಯಾಟ್ಸ್‌ಮನ್‌ ಮ್ಯಾಥ್ಯೂ ಹೇಡನ್‌, ಚೆನ್ನೈ ಸೂಪರ್‌ ಕಿಂಗ್ಸ್‌ನ ಯಶಸ್ವಿ ನಾಯಕ ಎಂ.ಎಸ್‌.ಧೋನಿಯನ್ನು ಹೊಗಳಲು ಹೊಸ ಪದಗಳನ್ನು ಹುಡುಕಿದ್ದಾರೆ. ‘ಇದು ಧೋನಿ ಯುಗ’, ‘ಧೋನಿ ರಾಷ್ಟ್ರನಾಯಕ’ ಎಂದು ಭಾರತ ತಂಡದ ಮಾಜಿ ನಾಯಕನನ್ನು ಕೊಂಡಾಡಿದ್ದಾರೆ. 

IPL 2019: ಚೆನ್ನೈಗೆ ಆಘಾತ- ಮುಂಬೈಗೆ ಚಾಂಪಿಯನ್ ಕಿರೀಟ

ಐಪಿಎಲ್‌ ಫೈನಲ್‌ಗೂ ಮುನ್ನ ಮಾತನಾಡಿದ ಹೇಡನ್‌, ‘ಧೋನಿ ಕೇವಲ ಒಬ್ಬ ಆಟಗಾರನಲ್ಲ. ಇದು ಅವರ ಯುಗ. ಹಲವು ರೀತಿಗಳಲ್ಲಿ ಅವರು ನನಗೆ ಒಂದು ಗಲ್ಲಿ ಕ್ರಿಕೆಟ್‌ ತಂಡದ ನಾಯಕನಾಗಿ ಕಾಣಿಸುತ್ತಾರೆ. ಅವರು ನಮ್ಮಲ್ಲೊಬ್ಬ. ತಂಡಕ್ಕಾಗಿ ಅವರು ಏನು ಬೇಕಿದ್ದರೂ ಮಾಡುತ್ತಾರೆ’ ಎಂದಿದ್ದಾರೆ. ‘ಧೋನಿ ತಂಡದ ಎಲ್ಲಾ ಆಟಗಾರರ ಯೋಗಕ್ಷೇಮ ವಿಚಾರಿಸುತ್ತಾರೆ. ಅವರು ನಿಜವಾದ ನಾಯಕ’ ಎಂದು ಹೇಡನ್‌ ಹೇಳಿದ್ದಾರೆ.

12ನೇ ಆವೃತ್ತಿಯ ಐಪಿಎಲ್ ಫೈನಲ್’ನಲ್ಲಿ ಮುಂಬೈ ಇಂಡಿಯನ್ಸ್ ಎದುರು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್’ಕಿಂಗ್ಸ್ ಶರಣಾಗಿದೆ. ಈ ಮೂಲಕ ಎರಡನೇ ಬಾರಿಗೆ ಸತತ 2 ಐಪಿಎಲ್ ಕಪ್ ಗೆಲ್ಲುವ ಅವಕಾಶ ಕೈಚೆಲ್ಲಿತು. ಈ ಮೊದಲು ಧೋನಿ ನೇತೃತ್ವದ CSK ತಂಡವು 2010 ಹಾಗೂ 11 ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆ ಬಳಿಕ 2018ರಲ್ಲೂ ಧೋನಿ ಐಪಿಎಲ್ ಕಪ್ ಜಯಿಸಿದ್ದರು.