ಪ್ರಸ್ತುತ 36ನೇ ವಯಸ್ಸಿನಲ್ಲಿ ಆಡುವವರು ವೇಗವಾಗಿ ಓಡಿ 2 ರನ್ ಗಳಿಸುವುದು ಸಾಮಾನ್ಯ ಆದರೆ ಈ ಆಟಗಾರ ಮೂರು ರನ್ ಓಡುತ್ತಾರೆ.
ನವದೆಹಲಿ(ಡಿ.25): ಭಾರತ ತಂಡದ ಮಾಜಿ ನಾಯಕ ಹಾಗೂ ಏಕದಿನ,ಟಿ20 ಪಂದ್ಯಗಳ ಹಾಲಿ ವಿಕೇಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಕೋಚ್ ರವಿ ಶಾಸ್ತ್ರಿ ಮೆಚ್ಚುಗೆಯ ಮಾತುಗಳನ್ನು ಆಡಿರುವುದು ಅಭಿಮಾನಿಗಳು ಹಾಗೂ ತಂಡದ ಇತರ ಸದಸ್ಯರಲ್ಲಿ ಅಚ್ಚರಿ ಮೂಡಿಸಿದೆ.
ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ಧೋನಿಯ ಆಟ ನೋಡಿದರೆ ಇತರ ಆಟಗಾರರಿಗೆ ಸ್ಫೂರ್ತಿಯೇ ಸರಿ. ಅವರು ಮೈದಾನದಲ್ಲಿ ಆಡುವ ಆಟ ನೋಡಿದರೆ 36 ವರ್ಷ ಎಂದು ಅನಿಸುವುದೇ ಇಲ್ಲ. 26 ವರ್ಷದ ಆಟಗಾರನ ಫಿಟ್'ನೆಸ್ ಹೊಂದಿದ್ದಾರೆ.
'ಅವರನ್ನು ಸುಖಾಸುಮ್ಮನೆ ಹೊಗಳುವುದಕ್ಕೆ ನಾವು ಮೂರ್ಖರಲ್ಲ. ನಾನು ಕಳೆದ 30-40 ವರ್ಷದಿಂದ ಕ್ರಿಕೆಟ್'ಅನ್ನು ನೋಡುತ್ತಿದ್ದೇನೆ.ವಿರಾಟ್ ಕೊಹ್ಲಿ ಕಳೆದ ಒಂದು ದಶಕದಿಂದ ತಂಡದ ಭಾಗವಾಗಿದ್ದಾರೆ. ಧೋನಿಯವರ ಆಟ ನೋಡಿದರೆ ಕೊಹ್ಲಿ ತರದ ಆಟಗಾರರನ್ನು ಮೀರುಸುವಂತಿದೆ'.
ಬೆರಗು ಮೂಡಿಸುವ ಅವರ ಆಟ
ಧೋನಿಯವರ ಸಾರಥ್ಯದಲ್ಲಿ ಭಾರತ ಈಗಾಗಲೇ ಏಕದಿನ, ಟಿ20 ವಿಶ್ವಕಪ್ ಜಯಿಸಿದೆ. ಭಾರತ ತಂಡದ ಮಾಜಿ ನಾಯಕ ವಿಕೇಟ್ ಕೀಪಿಂಗ್ ಹಿಂದೆ ನಿಂತರೆ ಕಿರಿಯ ಆಟಗಾರರಿಗಿಂದ ಅದ್ಭುತವಾಗಿ ಅವರ ಆಟ ಬೆರಗು ಮೂಡಿಸುತ್ತದೆ. ಪ್ರಸ್ತುತ 36ನೇ ವಯಸ್ಸಿನಲ್ಲಿ ಆಡುವವರು ವೇಗವಾಗಿ ಓಡಿ 2 ರನ್ ಗಳಿಸುವುದು ಸಾಮಾನ್ಯ ಆದರೆ ಈ ಆಟಗಾರ ಮೂರು ರನ್ ಓಡುತ್ತಾರೆ. ಇಂದಿಗೂ ಅವರ ಸ್ಥಾನ ತುಂಬಬಲ್ಲ ಮತ್ತೊಬ್ಬ ವಿಕೇಟ್ ಕೀಪರ್ ಏಕದಿನ ಪಂದ್ಯಗಳಲ್ಲಿ ಇಲ್ಲ.
2019 ವಿಶ್ವಕಪ್'ವರೆಗೂ ಆಡುತ್ತಾರೆ !
ಟೆಸ್ಟ್ ಕ್ರಿಕೆಟ್'ಗೆ ನಿವೃತ್ತಿ ಘೋಷಿಸಿರುವ ಕಾರಣ ಆದರೆ 2019ರವರೆಗಿನ ವಿಶ್ವಕಪ್'ವರೆಗೆ ಎಷ್ಟು ಸಾಧ್ಯವೋ ಅಷ್ಟು ಆಡುತ್ತಾರೆ' ಎಂದರ್ಥ. ಇಂಥ ಸಾಮರ್ಥ್ಯವುಳ್ಳ ಆಟಗಾರ ವಿಶ್ವದ ಪ್ರಸ್ತುತ ಯಾವುದೇ ತಂಡದಲ್ಲಿಲ್ಲ. ವಿಶ್ವಕಪ್'ನಲ್ಲಿ ಧೋನಿ ಭರವಸೆಯ ಆಟಗಾರನಾಗುವುದು ಖಂಡಿತಾ'
