ಆಸ್ಟ್ರೇಲಿಯಾ ವಿರುದ್ಧ 2ನೇ ಟಿ20 ಪಂದ್ಯ ಸೋತ್ರೂ ಟೀಂ ಇಂಡಿಯಾ ಮಾತ್ರ ದಾಖಲೆ ನಿರ್ಮಿಸುವುದರಲ್ಲಿ ಹಿಂದೆ ಬೀಳಲಿಲ್ಲ. ಹಾಲಿ-ಮಾಜಿ ನಾಯಕರಿಬ್ಬರು ದಾಖಲೆ ಬರೆದ್ರು. ಅದು ಅಪರೂಪ ದಾಖಲೆ. ಅದು ಯಾವ್ದು ಅಂತೀರಾ? ಇಲ್ಲಿದೆ ವಿವರ.
ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಏನು ಮಾಡಿದ್ರೂ ದಾಖಲೆಯಾಗುತ್ತೆ. ಪ್ರತಿ ಪಂದ್ಯದಲ್ಲೂ ಒಂದಲ್ಲ ಒಂದು ರೆಕಾರ್ಡ್ ಅನ್ನ ಇವರಿಬ್ಬರು ಮಾಡೇ ಮಾಡ್ತಾರೆ. ಇವರಿಬ್ಬರು ಆಡಿದ್ರೆ ದಾಖಲೆ, ಆಡದಿದ್ದರೂ ದಾಖಲೆ. ಕೊನೆಗೆ ಔಟಾದ್ರೂ ದಾಖಲೆ. ಸುಮ್ಮನಿದ್ರೂ ದಾಖಲೆ ಪುಟಕ್ಕೆ ಸೇರಿಕೊಳ್ತಾರೆ. ಗುವಾಹಟಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 2ನೇ ಟ್ವೆಂಟಿ-20 ಪಂದ್ಯದಲ್ಲೂ ಇವರಿಬ್ಬರ ಆರ್ಭಟ ನಡೆಸಲಿಲ್ಲ. ಆದ್ರೂ ದಾಖಲೆ ಪುಟ ಮಾತ್ರ ಸೇರಿದ್ರು.
ವಿರಾಟ್ ಕೊಹ್ಲಿ ಫಸ್ಟ್ ಟೈಮ್ ಡಕೌಟ್
ವಿರಾಟ್ ಕೊಹ್ಲಿ ಮೂರು ಮಾದರಿಯಲ್ಲೂ ಈಗ ರನ್ ಕಿಂಗ್. ಅವರು ಕ್ರೀಸಿಗೆ ಬಂದ್ರೆ ಬೌಲರ್ಸ್ ನಡುಗುತ್ತಾರೆ. ಯಾವ ದಿಕ್ಕಿಗೆ ಬಾಲ್ ಹೊಡೆಯುತ್ತಾರೆ ಅಂತ ಭಯ ಬೀಳ್ತಾರೆ. ಸದ್ಯಕ್ಕೆ ಅವರಿರುವ ಫಾರ್ಮ್ ನೋಡಿದ್ರೆ ಎಂತ ಬೌಲರ್ ಬೆಚ್ಚಿಬೀಳ್ತಾನೆ. ಟಿ20 ಕ್ರಿಕೆಟ್ನಲ್ಲಿ ಸದ್ಯಕ್ಕೆ ಅವರೇ ವರ್ಲ್ಡ್ ನಂಬರ್ ವನ್ ಬ್ಯಾಟ್ಸ್ಮನ್. ಅವರ ಬ್ಯಾಟಿಂಗ್ ಸರಾಸರಿ ಬರೋಬ್ಬರಿ 52.91. 52 ಟಿ20 ಮ್ಯಾಚ್ನಲ್ಲಿ 1852 ರನ್ ಹೊಡೆದಿದ್ದಾರೆ. ಟಿ20 ಕ್ರಿಕೆಟ್ನಲ್ಲಿ 3ನೇ ಗರಿಷ್ಠ ರನ್ ಸರದಾರ ಅವರೇ. ಇನ್ನು ಕೆಲವೇ ದಿನಗಳಲ್ಲಿ ಅಗ್ರಸ್ಥಾನಕ್ಕೇರಲಿದ್ದಾರೆ.
ಇಷ್ಟೆಲ್ಲಾ ದಾಖಲೆ ಬರೆದಿರುವ ವಿರಾಟ್, ಇದುವರೆಗೂ ಟಿ20 ಕ್ರಿಕೆಟ್ನಲ್ಲಿ ಡಕೌಟ್ ಆಗಿರಲಿಲ್ಲ. ಗುವಾಹಟಿ ಪಂದ್ಯಕ್ಕೂ ಮುನ್ನ ಅವರು 51 ಮ್ಯಾಚ್ಗಳಲ್ಲಿ ಶೂನ್ಯಕ್ಕೆ ಔಟಾಗಿರಲಿಲ್ಲ. ಆದ್ರೆ 52ನೇ ಪಂದ್ಯದಲ್ಲಿ ಮೊದಲ ಸಲ ಸೊನ್ನೆ ಸುತ್ತಿದ್ರು. ಈ ಮೂಲ್ಕ ಶೂನ್ಯಕ್ಕೆ ಔಟಾಗದೆ 51 ಪಂದ್ಯವಾಡಿದ ಮೊದಲ ಆಟಗಾರ ಎನಿಸಿಕೊಂಡರು. ವರ್ಲ್ಡ್ ರೆಕಾರ್ಡ್ ಮಾಡಿದ್ರು.
ಧೋನಿ ಮೊದಲ ಸಲ ಸ್ಟಂಪ್ ಔಟ್
ಮಹೇಂದ್ರ ಸಿಂಗ್ ಧೋನಿ ವಿಕೆಟ್ ಹಿಂದೆ ನಿಂತರೆ ಮಿಂಚಿನಂತೆ ಚುರುಕು. ಬ್ಯಾಟ್ಸ್ಮನ್ ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ಸ್ಟಂಪ್ ಔಟ್ ಮಾಡಿರುತ್ತಾರೆ. ಮಹಿ ಕೀಪಿಂಗ್ ಮಾಡ್ತಿದ್ದಾರೆ ಅಂದ್ರೆ ಸ್ಪಿನ್ನರ್ ಬೌಲಿಂಗ್ ಮಾಡುವಾಗ ಬ್ಯಾಟ್ಸ್ಮನ್ಗಳು ಕ್ರೀಸು ಬಿಡಲು ಹೆದರುತ್ತಾರೆ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲೇ ಏಕದಿನ ಕ್ರಿಕೆಟ್ನಲ್ಲಿ ನೂರು ಸ್ಟಂಪೌಟ್ ಮಾಡಿದ ದಾಖಲೆ ನಿರ್ಮಿಸಿದ್ದರು. ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ.
ಧೋನಿ ಈಗ ಗುವಾಹಟಿಯಲ್ಲಿ ಅದೇ ಸ್ಟಂಪೌಟ್ ಆಗೋ ಮೂಲ್ಕ ವಿಚಿತ್ರ ದಾಖಲೆ ನಿರ್ಮಿಸಿದ್ದಾರೆ. ಮಹಿ ಟೀಂ ಇಂಡಿಯಾ ಪರ 80 ಟಿ20 ಮ್ಯಾಚ್ಗಳನ್ನಾಡಿದ್ದಾರೆ. ಆದ್ರೆ ಗುವಾಹಟಿ ಪಂದ್ಯಕ್ಕೂ ಮುನ್ನ ಅವರು ಒಂದು ಬಾರಿಯೂ ಟಿ20 ಪಂದ್ಯದಲ್ಲಿ ಸ್ಟಂಪೌಟ್ ಆಗಿರಲಿಲ್ಲ. ಆದರೆ ಗುವಾಹಟಿಯಲ್ಲಿ ಆಡಂ ಜಂಪಾ ಬೌಲಿಂಗ್ನಲ್ಲಿ ಸ್ಟಂಪ್ ಔಟ್ ಆಗೂ ಮೂಲ್ಕ 80ನೇ ಪಂದ್ಯದ ನಂತರ ಮೊದಲ ಸಲ ಸ್ಟಂಪೌಟ್ ಆದ ಮೊದಲ ಆಟಗಾರ ಎನಿಸಿಕೊಂಡ್ರು.
ಧೋನಿ ಇದುವರೆಗೂ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸ್ಟಂಪ್ ಔಟ್ ಆಗಿರೋದು ಕೇವಲ ಐದು ಸಲ ಮಾತ್ರ. 301 ಏಕದಿನ ಪಂದ್ಯಗಳಲ್ಲಿ ಅವರು ಒಂದು ಸಲ ಮಾತ್ರ ಸ್ಟಂಪೌಟ್ ಆಗಿದ್ದಾರೆ. ಇದು ಸಹ ದಾಖಲೆಯೇ. ಟೆಸ್ಟ್ನಲ್ಲಿ ಮೂರು ಸಲ ಔಟಾಗಿದ್ದಾರೆ. ಮೊನ್ನೆ ಸೇರಿದಂತೆ ಒಟ್ಟು 5 ಸಲ ಟೀಂ ಇಂಡಿಯಾ ಪರ ಸ್ಟಂಪೌಟ್ ಆಗಿದ್ದಾರೆ.
