ಬೆಂಗಳೂರು[ಮೇ.11]: ’ಸೆಲ್ಫಿ ಮೈನೆ ಲೇಲಿ ಆಜ್’ ಹಾಡಿನ ಮೂಲಕ ಯೂಟ್ಯೂಬ್’ನಲ್ಲಿ ಧೂಳೆಬ್ಬಿಸಿದ್ದ ರ್ಯಾಪ್ ಸಿಂಗರ್ ಡಿನ್’ಚಕ್ ಪೂಜಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಪೂಜಾ ರಚಿಸಿದ ಹಾಡನ್ನು ಧೋನಿ ನೇತೃತ್ವದ ಚೆನ್ನೈ ಸೂಪರ್’ಕಿಂಗ್ಸ್’ಗೆ ಅರ್ಪಿಸಿದ್ದಾರೆ. ’ಸಿಎಸ್’ಕೆ ವಿಲ್ ವಿನ್’ ಹೆಸರಿನಲ್ಲಿ ಪೂಜಾ ರಚಿಸಿದ ಹಾಡು ಸಾಕಷ್ಟು ಸದ್ದು ಮಾಡುತ್ತಿದೆ. 
2 ವರ್ಷಗಳ ನಿಷೇಧದ ಬಳಿಕ ಐಪಿಎಲ್’ಗೆ ಕಮ್ ಬ್ಯಾಕ್ ಮಾಡಿರುವ ಚೆನ್ನೈ ಸೂಪರ್’ಕಿಂಗ್ಸ್ ಅದ್ಭುತ ಪ್ರದರ್ಶನ ತೋರುತ್ತಿದ್ದು, ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಸಿಎಸ್’ಕೆ ಬೆಂಬಲಿಸಿ ಪೂಜಾ ಹಾಡಿರುವ ಹಾಡು ಇಲ್ಲಿದೆ ನೋಡಿ..


ಯಾರು ಈ ಡಿನ್’ಚಕ್ ಪೂಜಾ.?
ಡಿನ್’ಚಕ್ ಪೂಜಾ 11ನೇ ಆವೃತ್ತಿಯ ಹಿಂದಿ ಬಿಗ್ ಬಾಸ್ ಸ್ಪರ್ಧಿ. ದಿಲ್ಲೋಂಕಾ ಶೂಟರ್, ಸ್ವಾಗ್ ವಾಲಿ ಟೋಪಿ ಸೇರಿದಂತೆ ವಿವಿಧ ವೈರಲ್ ಹಾಡುಗಳನ್ನು ಯೂಟ್ಯೂಬ್’ನಲ್ಲಿ ಹರಿಬಿಡುವ ಮೂಲಕ ದಿನಬೆಳಗಾಗುವುದರೊಳಗಾಗಿ ಜನಪ್ರಿಯವಾಗಿದ್ದರು.