ಭಾರತ-ಇಂಗ್ಲೆಂಡ್ ಏಕದಿನ: ಟೀಂ ಇಂಡಿಯಾದ 2ನೇ ವಿಕೆಟ್ ಪತನ

Dhawan Falls For 44 As India Lose 2nd Wicket vs England
Highlights

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯ ಆರಂಭದಲ್ಲೇ ಕುತೂಹಲ ಮೂಡಿಸಿದೆ. ಟಾಸ್ ಸೋತು ಬ್ಯಾಟಿಂಗ್ ಇಳಿದಿರುವ ಟೀಂ ಇಂಡಿಯಾ ಪ್ರದರ್ಶನ ಹೇಗಿದೆ? ಇಲ್ಲಿದೆ ವಿವರ.

ಲೀಡ್ಸ್(ಜು.17): ಇಂಗ್ಲೆಂಡ್ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದಿರುವ ಭಾರತ 2 ವಿಕೆಟ್ ಕಳೆದುಕೊಂಡಿದೆ. ಸರಣಿ ನಿರ್ಧಾರದ ಪಂದ್ಯದಲ್ಲಿ ಭಾರತ ಎಚ್ಚರಿಕೆಯ ಆರಂಭ ಪಡೆದಿತ್ತು. ಆದರೆ ರೋಹಿತ್ ಶರ್ಮಾ ಕೇವಲ 2 ರನ್‌ಗಳಿಸಿ ನಿರ್ಗಮಿಸಿದರು.

ರೋಹಿತ್ ನಿರ್ಗಮನದ ಬಳಿಕ ಶಿಖರ್ ಧವನ್ ಹಾಗೂ ನಾಯಕ ವಿರಾಟ್ ಕೊಹ್ಲಿ ಜೊತೆಯಾಟದಿಂದ ಟೀಂ ಇಂಡಿಯಾ ಚೇತರಿಸಿಕೊಂಡಿತು. ಆದರೆ ಧವನ್ ಅರ್ಧಶತಕದ ಸನಿಹದಲ್ಲಿ ಎಡವಿದರು. 44 ರನ್ ಸಿಡಿಸಿದ ಧವನ್ ರನೌಟ್‌ಗೆ ಬಲಿಯಾದರು. ಈ ಮೂಲಕ ಭಾರತ 84ರನ್‌ಗೆ 2ನೇ ವಿಕೆಟ್ ಕಳೆದುಕೊಂಡಿತು. 

 

 

ಇಂಗ್ಲೆಂಡ್  ವಿರುದ್ಧದ  3 ಏಕದಿನ ಪಂದ್ಯದ ಸರಣಿಯ 1-1 ಅಂತರದಲ್ಲಿ ಸಮಭಲಗೊಂಡಿದೆ. ಹೀಗಾಗಿ ಇಂದಿನ ಪಂದ್ಯ ಸರಣಿಯನ್ನ ನಿರ್ಧರಿಸಲಿದೆ. 

loader