Asianet Suvarna News Asianet Suvarna News

ನ್ಯೂಜಿಲೆಂಡ್ ಓಪನ್: ಭಾರತದ ಸವಾಲು ಅಂತ್ಯ

ಪಂದ್ಯದ ಸೋಲಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಣಯ್ 'ಈ ಹಿಂದಿನ ಟೂರ್ನಿಯಲ್ಲಿ ನನ್ನ ಒಟ್ಟಾರೆ ಪ್ರದರ್ಶನದ ಬಗ್ಗೆ ನನಗೆ ತೃಪ್ತಿಯಿದೆ. ಆದರೆ ಈ ದಿನ ನನ್ನದಾಗಿರಲಿಲ್ಲ ಎಂದು 24 ವರ್ಷದ ಕೇರಳದ ಆಟಗಾರ ತಿಳಿಸಿದ್ದಾರೆ'

Despite loss in New Zealand Prannoy satisfied with his overall performance
  • Facebook
  • Twitter
  • Whatsapp

ಆಕ್ಲೆಂಡ್(ಆ.04): ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಎಚ್.ಎಸ್. ಪ್ರಣಯ್ ಮತ್ತು ಸೌರಭ್ ವರ್ಮಾ, ನ್ಯೂಜಿಲೆಂಡ್ ಓಪನ್ ಗ್ರ್ಯಾನ್ ಪ್ರೀ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಕಂಡಿದ್ದಾರೆ. ಈ ಮೂಲಕ ಪಂದ್ಯಾವಳಿಯಲ್ಲಿ ಭಾರತದ ಸವಾಲು ಅಂತ್ಯವಾಗಿದೆ.

ಇಂದು ನಡೆದ ಕ್ವಾರ್ಟರ್‌'ಫೈನಲ್‌'ನಲ್ಲಿ ಪ್ರಣಯ್ 10-21, 22-20, 21-23 ರೋಚಕ ಗೇಮ್‌'ಗಳಿಂದ ಚೈನೀಸ್ ತೈಪೆಯ ಲಿನ್ ಯು ಹ್ಸಿನ್ ಎದುರು ಪರಾಭವಗೊಂಡರು.

ಮತ್ತೊಂದು ಕ್ವಾರ್ಟರ್ ಪಂದ್ಯದಲ್ಲಿ ಸೌರಭ್ 19-21, 16-21 ನೇರ ಗೇಮ್‌'ಗಳಿಂದ ಹಾಂಕಾಂಗ್‌'ನ ಶ್ರೇಯಾಂಕ ರಹಿತ ಲೀ ಚೆಕ್ ಯಿ ಎದುರು ಸೋಲುಂಡರು.

ಪಂದ್ಯದ ಸೋಲಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಣಯ್ 'ಈ ಹಿಂದಿನ ಟೂರ್ನಿಯಲ್ಲಿ ನನ್ನ ಒಟ್ಟಾರೆ ಪ್ರದರ್ಶನದ ಬಗ್ಗೆ ನನಗೆ ತೃಪ್ತಿಯಿದೆ. ಆದರೆ ಈ ದಿನ ನನ್ನದಾಗಿರಲಿಲ್ಲ ಎಂದು 24 ವರ್ಷದ ಕೇರಳದ ಆಟಗಾರ ತಿಳಿಸಿದ್ದಾರೆ'

Follow Us:
Download App:
  • android
  • ios