Asianet Suvarna News Asianet Suvarna News

ಡೆನ್ಮಾರ್ಕ್ ಓಪನ್: ಫೈನಲ್‌ಗೆ ಎಂಟ್ರಿ ಕೊಟ್ಟ ಸೈನಾ ನೆಹ್ವಾಲ್!

ಡೆನ್ಮಾರ್ಕ್ ಓಪನ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಸೈನಾ ನೆಹ್ವಾಲ್ ಫೈನಲ್ ಪ್ರವೇಶಿಸೋ ಮೂಲಕ ಭಾರತೀಯರ ನಿರೀಕ್ಷೆಯನ್ನ ಮತ್ತಷ್ಟು ಹೆಚ್ಚಿಸಿದ್ದಾರೆ. ಆದರೆ ಪುರುಷರ ವಿಭಾಗದಲ್ಲಿ ಭಾರತ ಹಿನ್ನಡೆ ಅನುಭವಿಸಿದೆ.

Denmark Open Saina Nehwal enters Final
Author
Bengaluru, First Published Oct 21, 2018, 7:51 AM IST
  • Facebook
  • Twitter
  • Whatsapp

ಡೆನ್ಮಾರ್ಕ(ಅ.21): ಡೆನ್ಮಾರ್ಕ್ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶನಿವಾರ ಭಾರತಕ್ಕೆ ಮಿಶ್ರ ಫಲ ದೊರಕಿದೆ. ಮಹಿಳಾ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್‌ ಫೈನಲ್‌ಗೇರಿದರೆ, ಕಿದಂಬಿ ಶ್ರೀಕಾಂತ್‌ ಪುರುಷರ ಸೆಮೀಸ್‌ನಲ್ಲಿ ಸೋತು ಹೊರಬಿದ್ದರು.

ಸೆಮೀಸ್‌ನಲ್ಲಿ ಸೈನಾ ಇಂಡೋನೇಷ್ಯಾದ ಗ್ರಿಗೋರಿ ಟುನ್ಜುಂಗ್‌ ವಿರುದ್ಧ 21-11, 21-12 ಗೇಮ್‌ಗಳಲ್ಲಿ ಗೆಲುವು ಪಡೆದರು. ಕ್ವಾರ್ಟರ್‌ನಲ್ಲಿ ಸೈನಾ, ಜಪಾನ್‌ನ ಒಕುಹಾರ ವಿರುದ್ಧ ಗೆದ್ದಿದ್ದರು. ಫೈನಲಲ್ಲಿ ವಿಶ್ವ ನಂ.1 ತೈ ತ್ಸು ಯಿಂಗ್‌ ಎದುರಾಗಲಿದ್ದಾರೆ. 

ಕ್ವಾರ್ಟರಲ್ಲಿ ಸಮೀರ್‌ ವರ್ಮಾ ವಿರುದ್ಧ ಗೆದ್ದಿದ್ದ ಶ್ರೀಕಾಂತ್‌, ಸೆಮೀಸ್‌ನಲ್ಲಿ ವಿಶ್ವ ನಂ.1 ಜಪಾನ್‌ನ ಕೆಂಟೊ ಮೊಮೊಟಾ ವಿರುದ್ಧ 16-21, 12-21 ಸೋತರು. ಮಹಿಳಾ ಡಬಲ್ಸ್‌ನ ಕ್ವಾರ್ಟರ್‌ನಲ್ಲಿ ಅಶ್ವಿನಿ-ಸಿಕ್ಕಿ ಜೋಡಿ ಸೋಲುಂಡಿತು.

Follow Us:
Download App:
  • android
  • ios