ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಚೇತೇಶ್ವರ್ ಪೂಜಾರ ಅವರನ್ನು ಬರಸೆಳೆದುಕೊಳ್ಳಲು ಎಲ್ಲಾ ತಂಡಗಳು ಕಸರತ್ತು ನಡೆಸುತ್ತಿರುವ ಸುದ್ದಿ ಕೇಳಿಬರುತ್ತಿದೆ.
ನವದೆಹಲಿ(ಏ. 01): ಈ ಬಾರಿಯ ಐಪಿಎಲ್ ಇಂಜುರಿ ಪ್ರೀಮಿಯರ್ ಲೀಗ್ ಎಂದು ಕುಖ್ಯಾತವಾಗಿದೆ. ಎಲ್ಲಾ ತಂಡಗಳ ಅನೇಕ ಪ್ರಮುಖ ಆಟಗಾರರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಲವರು ಲೀಗ್'ನಿಂದಲೇ ಔಟ್ ಆಗಿದ್ದಾರೆ. ಗಾಯಾಳುಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಎಬಿಡಿ, ಉಮೇಶ್ ಯಾದವ್, ರವೀಂದ್ರ ಜಡೇಜಾ, ಮುಸ್ತಾಫಿಜುರ್ ಮೊದಲಾದ ಸ್ಟಾರ್ ಆಟಗಾರರಿದ್ದಾರೆ. ಗಾಯಾಳುಗಳ ಪಟ್ಟಿ ದೊಡ್ಡದಿರುವುದರಿಂದ ಅವರ ರೀಪ್ಲೇಸ್'ಮೆಂಟ್'ಗಾಗಿ ಐಪಿಎಲ್ ಫ್ರಾಂಚೈಸಿಗಳು ಹುಡುಕಾಟ ನಡೆಸುತ್ತಿವೆ.
ಬಿಕರಿಯಾಗದವರಿಗೆ ಡಿಮ್ಯಾಂಡು:
ಈ ಸೀಸನ್'ನ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಹಲವು ಪ್ರಮುಖ ಆಟಗಾರರು ಸೇಲ್ ಆಗದೇ ಉಳಿದದ್ದು ಅಚ್ಚರಿ ಮೂಡಿಸಿತ್ತು. ಹರಾಜಿನಲ್ಲಿ ಕೇವಲ 66 ಮಂದಿ ಮಾತ್ರ ಮಾರಾಟವಾಗಿದ್ದರು. ಇನ್ನುಳಿದವರನ್ನು ಫ್ರಾಂಚೈಸಿಗಳು ನಿರ್ಲಕ್ಷಿಸಿದ್ದರು. ಈಗ, ಬಿಕರಿಯಾಗದ ಆಟಗಾರರ ಹಿಂದೆ ಐಪಿಎಲ್ ತಂಡಗಳ ಮಾಲಿಕರು ಮುಗಿಬಿದ್ದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಚೇತೇಶ್ವರ್ ಪೂಜಾರ ಅವರನ್ನು ಬರಸೆಳೆದುಕೊಳ್ಳಲು ಎಲ್ಲಾ ತಂಡಗಳು ಕಸರತ್ತು ನಡೆಸುತ್ತಿರುವ ಸುದ್ದಿ ಕೇಳಿಬರುತ್ತಿದೆ. ನೇಥನ್ ಲಯೋನ್, ಡೇವಿಡ್ ವಿಯೆಸ್, ಬ್ರಾಡ್ ಹಾಗ್, ಆಂಡ್ರೆ ಫ್ಲೆಚರ್, ಇಶಾಂತ್ ಶರ್ಮಾ ಮೊದಲಾದ ಆಟಗಾರರಿಗೆ ಒಳ್ಳೆಯ ಬೇಡಿಕೆ ಬಂದಿದೆಯಂತೆ. ಮಹಿಪಾಲ್ ಲೊಮ್ರೋರ್, ಪೃಥ್ವಿ ಶಾ, ಪ್ರಿಯಾಂಕ ಪಾಂಚಾಲ್ ಮೊದಲಾದ ಕಿರಿಯ ಸ್ಟಾರ್ ಪ್ಲೇಯರ್'ಗಳಿಗೂ ಡಿಮ್ಯಾಂಡ್ ಇದೆ.
ಬಿಕರಿಯಾಗದ ಪ್ರಮುಖ ಆಟಗಾರರು:
ಅಲೆಕ್ಸ್ ಹೇಲ್ಸ್
ಇರ್ಫಾನ್ ಪಠಾಣ್
ಶಾನ್ ಅಬ್ಬಾಟ್
ಜಾನಿ ಬೇರ್'ಸ್ಟೋ
ಆಂಡ್ರೆ ಫ್ಲೆಚರ್
ಇಶಾಂತ್ ಶರ್ಮ
ಇಮ್ರಾನ್ ತಾಹಿರ್
ಪೃಥ್ವಿ ಶಾ
ಉನ್ಮುಕ್ತ್ ಚಾಂಚ್
ಪ್ರಿಯಾಂಕ್ ಪಾಂಚಾಲ್
ಶ್ರೀವತ್ಸ್ ಗೋಸ್ವಾಮಿ
ಚೇತೇಶ್ವರ್ ಪೂಜಾರ
ಮಾರ್ಲಾನ್ ಸ್ಯಾಮುವೆಲ್ಸ್
ನಿಕ್ ಮ್ಯಾಡಿನ್ಸನ್
ಪರ್ವೆಜ್ ರಸೂಲ್
ಜೇಸನ್ ಹೋಲ್ಡರ್
ಡೇವಿಡ್ ವಿಯೆಸ್
ತಿಸಾರಾ ಪೆರೀರಾ
ಪಂಕಜ್ ಸಿಂಗ್
ನೇಥನ್ ಲಯೋನ್
ವಾಯ್ನೆ ಪಾರ್ನೆಲ್
ಸಬ್ಬೀರ್ ರಹಮಾನ್
