ಡೆಲ್ಲಿ ನೀಡಿದ್ದ 175 ರನ್’ಗಳ ಗುರಿ ಬೆನ್ನತ್ತಿದ್ದ ಮುಂಬೈ 163 ರನ್’ಗಳಿಗೆ ಸರ್ವಪತನ ಕಂಡಿತು. ಅಮಿತ್ ಮಿಶ್ರಾ, ಸಂದೀಪ್ ಲೆಮಿಚ್ಚಾನೆ ಹಾಗೂ ಹರ್ಷಲ್ ಪಟೇಲ್ ತಲಾ ಮೂರು ಹಾಗೂ ಟ್ರೆಂಟ್ ಬೌಲ್ಟ್ ಒಂದು ವಿಕೆಟ್ ಪಡೆದು ಡೆಲ್ಲಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ನವದೆಹಲಿ[ಮೇ.20]: ಬ್ಯಾಟಿಂಗ್ ಹಾಗೂ ಬೌಲಿಂಗ್’ನಲ್ಲಿ ಸಾಂಘಿಕ ಪ್ರದರ್ಶನ ತೋರಿದ ಡೆಲ್ಲಿ ಡೇರ್’ಡೆವಿಲ್ಸ್ 11 ರನ್’ಗಳ ಭರ್ಜರಿ ಜಯಸಾಧಿಸಿತು. ಇದರ ಜೊತೆಗೆ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಕನಸು ಕೂಡಾ ಭಗ್ನಗೊಂಡಿತು.
ಡೆಲ್ಲಿ ನೀಡಿದ್ದ 175 ರನ್’ಗಳ ಗುರಿ ಬೆನ್ನತ್ತಿದ್ದ ಮುಂಬೈ 163 ರನ್’ಗಳಿಗೆ ಸರ್ವಪತನ ಕಂಡಿತು. ಅಮಿತ್ ಮಿಶ್ರಾ, ಸಂದೀಪ್ ಲೆಮಿಚ್ಚಾನೆ ಹಾಗೂ ಹರ್ಷಲ್ ಪಟೇಲ್ ತಲಾ ಮೂರು ಹಾಗೂ ಟ್ರೆಂಟ್ ಬೌಲ್ಟ್ ಒಂದು ವಿಕೆಟ್ ಪಡೆದು ಡೆಲ್ಲಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಡೆಲ್ಲಿಯ ಕಠಿಣ ಸವಾಲು ಬೆನ್ನತ್ತಿದ ಮುಂಬೈ ತಂಡದ ಬ್ಯಾಟ್ಸ್’ಮನ್’ಗಳು ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾದರು. ಎವಿನ್ ಲೆವಿಸ್[48] ಹಾಗೂ ಬೆನ್ ಕಟ್ಟಿಂಗ್ಸ್[37] ಹೊರತುಪಡಿಸಿದರೆ ಉಳಿದ ಬ್ಯಾಟ್ಸ್’ಮನ್’ಗಳು ವಿಫಲವಾಗಿದ್ದು ಮುಂಬೈ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಅದರಲ್ಲೂ ಪೊಲ್ಲಾರ್ಡ್, ಇಶಾನ್ ಕಿಶನ್ ಹಾಗೂ ಕೃನಾಲ್ ಪಾಂಡ್ಯ ಎರಡಂಕಿ ಮೊತ್ತ ಮುಟ್ಟಲು ವಿಫಲವಾಗಿದ್ದು ಮುಂಬೈಗೆ ಹಿನ್ನಡೆಯಾಗಲು ಪ್ರಮುಖ ಕಾರಣವೆನಿಸಿತು.
ಇದಕ್ಕೂ ಮೊದಲು ರಿಶಭ್ ಪಂತ್ ಹಾಗೂ ವಿಜಯ್ ಶಂಕರ್ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಡೇರ್’ಡೆವಿಲ್ಸ್ 174 ರನ್ ಗಳಿಸಿತ್ತು.
ಸಂಕ್ಷಿಪ್ತ ಸ್ಕೋರ್:
DD: 174/4
ರಿಶಭ್ ಪಂತ್: 64
ಕೃನಾಲ್ ಪಾಂಡ್ಯ: 11/1
MI: 163/10
ಎವಿನ್ ಲೆವಿಸ್: 48
ಅಮಿತ್ ಮಿಶ್ರಾ: 19/3