ಡೆಲ್ಲಿ ಪರ ಆರಂಭಿಕರಾಗಿ ಪೃಥ್ವಿ ಶಾ ಹಾಗೂ ಕಾಲಿನ್ ಮನ್ರೋ ಕಣಕ್ಕಿಳಿಯಳಿಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಹಾಗೂ ರಿಶಭ್ ಪಂತ್ ತಂಡಕ್ಕೆ ಬಲ ತುಂಬಲಿದ್ದಾರೆ. ಪಂತ್ ಇದುವರೆಗೆ 306 ರನ್ ಬಾರಿಸಿದ್ದರೆ, ಅಯ್ಯರ್ 257 ರನ್ ಸಿಡಿಸಿದ್ದಾರೆ.
ನವದೆಹಲಿ[ಮೇ.02]: ಸಾಲು ಸಾಲು ಸೋಲುಗಳಿಂದ ಹೈರಾಣಾಗಿದ್ದ ಡೆಲ್ಲಿ ಡೇರ್’ಡೆವಿಲ್ಸ್ ತಂಡವನ್ನು ಈಗ ಶ್ರೇಯಸ್ ಅಯ್ಯರ್ ಮುನ್ನಡೆಸುತ್ತಿದ್ದಾರೆ. ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲೇ ಕೆಕೆಆರ್ ಎದುರು ಗೆದ್ದು ಎರಡನೇ ಪಂದ್ಯದಲ್ಲಿ ಸಿಎಸ್’ಕೆ ವಿರುದ್ಧ ಮುಗ್ಗರಿಸಿತ್ತು. ಇದೀಗ ಪ್ಲೇ ಆಫ್ ಹಂತ ಪ್ರವೇಶಿಸಬೇಕಾದರೆ ಡೆಲ್ಲಿ ಇಂದಿನ ಪಂದ್ಯವೂ ಸೇರಿದಂತೆ ಲೀಗ್ ಹಂತದ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಆಡಿದ 8 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳನ್ನಷ್ಟೇ ಗೆದ್ದಿರುವ ಡೆಲ್ಲಿ ತವರಿನಲ್ಲಿಂದು ರಾಜಸ್ಥಾನದ ಸವಾಲನ್ನು ಎದುರಿಸಲಿದೆ.
ಡೆಲ್ಲಿ ತಂಡದ ಸಂಭಾವ್ಯ ಪಟ್ಟಿ ಹೀಗಿರಬಹುದು:
ಡೆಲ್ಲಿ ಪರ ಆರಂಭಿಕರಾಗಿ ಪೃಥ್ವಿ ಶಾ ಹಾಗೂ ಕಾಲಿನ್ ಮನ್ರೋ ಕಣಕ್ಕಿಳಿಯಳಿಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಹಾಗೂ ರಿಶಭ್ ಪಂತ್ ತಂಡಕ್ಕೆ ಬಲ ತುಂಬಲಿದ್ದಾರೆ. ಪಂತ್ ಇದುವರೆಗೆ 306 ರನ್ ಬಾರಿಸಿದ್ದರೆ, ಅಯ್ಯರ್ 257 ರನ್ ಸಿಡಿಸಿದ್ದಾರೆ.
ಇನ್ನು ಆಲ್ರೌಂಡರ್ ಗ್ಲೇನ್ ಮ್ಯಾಕ್ಸ್’ವೆಲ್ ಹಾಗೂ ವಿಜಯ್ ಶಂಕರ್ ಕೂಡಾ ಉತ್ತಮ ರನ್ ಕಲೆಹಾಕುವ ಸಾಮರ್ಥ್ಯ ಹೊಂದಿದ್ದು ಬಹುತೇಕ ಈ ಇಬ್ಬರೂ ಆಟಗಾರರು ತಂಡದಲ್ಲಿ ಸ್ಥಾನ ಪಡೆಯಬಹುದು.
ಇನ್ನು ಬೌಲಿಂಗ್ ವಿಭಾಗದಲ್ಲಿ ರಾಹುಲ್ ತೆವಾಟಿಯಾ, ಲಿಯಾಮ್ ಫ್ಲಂಕೆಟ್, ಟ್ರೆಂಟ್ ಬೌಲ್ಟ್ ಹಾಗೂ ಆವೇಶ್ ಖಾನ್ ಬೌಲಿಂಗ್ ನೇತೃತ್ವ ವಹಿಸುವ ಸಾಧ್ಯತೆ ಹೆಚ್ಚು. ಅಮಿತ್ ಮಿಶ್ರಾ ಅಷ್ಟೇನು ನಿರೀಕ್ಷಿತ ಪ್ರದರ್ಶನ ತೋರದೇ ಇದ್ದರೂ ಅವರ ಅನುಭವ ತಂಡಕ್ಕೆ ಅನುಕೂಲವಾಗುವ ಸಾಧ್ಯತೆಯೇ ಹೆಚ್ಚು.