Asianet Suvarna News Asianet Suvarna News

ಜೋಕೋವಿಕ್ ತೆಕ್ಕೆಯಲ್ಲಿ ದೀಪಿಕಾ ಪಡುಕೋಣೆ: ಇಬ್ಬರ ಕುರಿತಾಗಿ ಜೋಕೊ ಮಾಜಿ ಗೆಳತಿ ಹೇಳಿದ್ದೇನು ಗೊತ್ತಾ?

ಕ್ರೀಡಾ ತಾರೆಗಳ ಹಾಗೂ ಸಿನಿಮಾ ತಾರೆಯರ ನಡುವೆ ಪ್ರೀತಿ ಪ್ರೇಮ ಪ್ರಣಯ ಹೊಸತೇನಲ್ಲ. ಆದರೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಿಚಾರದಲ್ಲಿ ಅದು ಕೊಂಚ ಜಾಸ್ತಿ ಎನ್ನಬಹುದು. ಈ ಬಾಲಿವುಡ್ ನಟಿಯೊಂದಿಗೆ ಧೋನಿ, ಯುವರಾಜ್ ಸಿಂಗ್ ಹೆಸರು ಹಿಂದೆ ದೊಡ್ಡ ಮಟ್ಟದಲ್ಲಿ ಕಾಣಿಸಿಕೊಂಡಿತ್ತು.

Deepika Padukone Is Who Novak Djokovic Really Wants To Date Claims His Alleged Ex
  • Facebook
  • Twitter
  • Whatsapp

ಕ್ರೀಡಾ ತಾರೆಗಳ ಹಾಗೂ ಸಿನಿಮಾ ತಾರೆಯರ ನಡುವೆ ಪ್ರೀತಿ ಪ್ರೇಮ ಪ್ರಣಯ ಹೊಸತೇನಲ್ಲ. ಆದರೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಿಚಾರದಲ್ಲಿ ಅದು ಕೊಂಚ ಜಾಸ್ತಿ ಎನ್ನಬಹುದು. ಈ ಬಾಲಿವುಡ್ ನಟಿಯೊಂದಿಗೆ ಧೋನಿ, ಯುವರಾಜ್ ಸಿಂಗ್ ಹೆಸರು ಹಿಂದೆ ದೊಡ್ಡ ಮಟ್ಟದಲ್ಲಿ ಕಾಣಿಸಿಕೊಂಡಿತ್ತು.

ಸದ್ಯ ದೀಪಿಕಾ ಪಡುಕೋಣೆಯ ಹೆಸರಿನೊಂದಿಗೆ ಬಲವಾಗಿ ಕೇಳಿ ಬಂದಿರುವ ಹೆಸರು ಟೆನಿಸ್'ನ ಮಾಜಿ ವಿಶ್ವ ನಂ 1 ತಾರೆ ನೊವಾಕ್ ಜೋಕೊವಿಕ್'ರದ್ದು. 2014ರಿಂದಲೇ ಇವರಿಬ್ಬರ ವಿಚಾರ ಗುಸು ಗುಸು ಸದ್ದು ಮಾಡಿತ್ತಾದರೂ, ಇದೀಗ ತನ್ನ ಮಾಜಿ ಗೆಳತಿ ನತಾಶಾ ಬೆಕ್ಲಾವಕ್ ನೇರಾನೇರಾ ಮಾಡುವುದರೊಂದಿಗೆ ಈಗ ಈ ವಿಚಾರ ವಿಶ್ವ ಮಟ್ಟದಲ್ಲಿ ಸದ್ದು ಮಾಡಿದೆ.

ಮಾಜಿ ಗೆಳತಿ ಹೇಳಿದ್ದೇನು?

ಜೋಕೊವಿಕ್ ಮಾಜಿ ಗೆಳತಿ, ಪ್ರಸಿದ್ಧ ಪಾಪ್ ಗಾಯಕಿ ನತಾಶಾ ತನ್ನ ಸಂದರ್ಶನವೊಂದರಲ್ಲಿ ಈ ಕುರಿತಾಗಿ ಮಾತನಾಡಿದ್ದಾರೆ. ತನ್ನ ಹಾಗೂ ಜೋಕೊ ನಡುವಿನ ಸಂಬಂಧ ಮುರಿದ ಬಳಿಕ ಅವರು ದೀಪಿಕಾಳೊಂದಿಗೆ ಡೇಟಿಂಗ್ ನಡೆಸುತ್ತಿದ್ದರು ಎಂದು ಆರೋಪಿಸಿದ್ದರು.

2014ರಿಂದಲೇ ಪರಿಚಯ

ಜೋಕೊವಿಕ್ ದೀಪಿಕಾ ಮೊದಲು ಪರಿಚಿತರಾದದ್ದು 2014ರಲ್ಲಿ, ಮಹೇಶ್ ಭೂಪತಿ ಮಾಲಕತ್ವದಲ್ಲಿ ಅಂತರಾಷ್ಟ್ರೀಯ ಪ್ರೀಮಿಯರ್ ಟೆನಿಸ್ ಲೀಗ್'ನಲ್ಲಿ ಆಡಲು ಜೋಕೋ ಭಾರತಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಜೊಕೊ ಮತ್ತು ದೀಪಿಕಾ ಗೆಳೆಯರಾದರು.

ಇನ್ನು ಈ ಮಾತುಗಳನ್ನು ಪುಷ್ಟೀಕರಿಸಿದ್ದು, 2016ರಲ್ಲಿ ಹಾಲಿವುಡ್ ಸಿನಿಮಾದ ಶೂಟಿಂಗ್'ಗಾಗಿ ದೀಪಿಕಾ ಅಮೆರಿಕಾದಲ್ಲಿದ್ದಾಗ ಿಬ್ಬರೂ ಸೇರಿ ರೆಸ್ಟೋರೆಂಟ್'ವೊಂದರಲ್ಲಿ ಪಾರ್ಟಿ ಮಾಡಿರುವುದು. ಅಲ್ಲದೇ ಇಬ್ಬರೂ ಜೊತೆ ಜೊತೆಯಾಗಿಯೇ ಓಡಾಡುತ್ತಿದ್ದ ಫೋಟೋಗಳು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದ್ದವು.

Follow Us:
Download App:
  • android
  • ios