ಇತ್ತೀಚಿನ ಶ್ರೀಲಂಕಾ ವಿರುದ್ಧದ ಮೂರು ಪಂದ್ಯ ಸರಣಿಯಲ್ಲಿ ಎಬಿಡಿ ಪಡೆ 3-2 ಅಂತರದಿಂದ ಗೆದ್ದಿತ್ತು. 87.33ರ ಸರಾಸರಿಯಲ್ಲಿ ಡಿವಿಲಿಯರ್ಸ್‌ 262 ರನ್ ಕಲೆಹಾಕಿದ್ದರು.

ದುಬೈ(ಮಾ.10): ದ.ಆಫ್ರಿಕಾ ನಾಯಕ ಎಬಿ ಡಿವಿಲಿಯರ್ಸ್‌ ಮತ್ತೊಮ್ಮೆ ಅಂತಾರಾಷ್ಟ್ರೀಯ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಹಾಕುವುದರೊಂದಿಗೆ ಆಸ್ಟ್ರೇಲಿಯಾದ ಆರಂಭಿಕ ಡೇವಿಡ್ ವಾರ್ನರ್ ಅವರನ್ನು ಹಿಂದಿಕ್ಕಿದ್ದಾರೆ.

ಇಂದು ಪ್ರಕಟವಾದ ಅಧಿಕೃತ ಶ್ರೇಯಾಂಕ ಪಟ್ಟಿಯಲ್ಲಿ ಡಿವಿಲಿಯರ್ಸ್‌ (875 ಪಾಯಿಂಟ್ಸ್) ಮೊದಲ ಸ್ಥಾನದಲ್ಲಿರುವುದನ್ನು ಖಚಿತಪಡಿಸಿದೆ. ಇತ್ತೀಚಿನ ಶ್ರೀಲಂಕಾ ವಿರುದ್ಧದ ಮೂರು ಪಂದ್ಯ ಸರಣಿಯಲ್ಲಿ ಎಬಿಡಿ ಪಡೆ 3-2 ಅಂತರದಿಂದ ಗೆದ್ದಿತ್ತು. 87.33ರ ಸರಾಸರಿಯಲ್ಲಿ ಡಿವಿಲಿಯರ್ಸ್‌ 262 ರನ್ ಕಲೆಹಾಕಿದ್ದರು.

ಇನ್ನು ದ್ವಿತೀಯ ಸ್ಥಾನದಲ್ಲಿರುವ ವಾರ್ನರ್ (871) 19 ಪಾಯಿಂಟ್ಸ್‌'ಗಳಿಂದ ಭಾರತದ ವಿರಾಟ್ ಕೊಹ್ಲಿ (852) ಅವರನ್ನು ತೃತೀಯ ಸ್ಥಾನಕ್ಕೆ ನೂಕಿದ್ದಾರೆ. ಇನ್ನು ಇಂಗ್ಲೆಂಡ್‌ನ ಜೋ ರೂಟ್ (787) 4ನೇ ಸ್ಥಾನದಲ್ಲಿದ್ದಾರೆ.