ಡು ಪ್ಲೆಸಿಸ್ ಸಂಪೂರ್ಣ ಸರಣಿಗೆ ಲಭ್ಯರಿಲ್ಲ. ಎಬಿಡಿ 4ನೇ ಪಂದ್ಯದಿಂದ ಆಡಲಿದ್ದು ಪೂರ್ಣವಾಗಿ ಫೀಲ್ಡಿಗಿಳಿಯುವುದು ಇನ್ನು ಖಚಿತವಿಲ್ಲ.

ಕೇಪ್'ಟೌನ್(ಫೆ.06): ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಸರಣಿ ಕ್ಲೀನ್ ಸ್ವೀಪ್ ಮಾಡುವುದು ಖಚಿತವಾದಂತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗಾಯದ ಸಮಸ್ಯೆಯಿಂದ ಈಗಾಗಲೇ ಇಬ್ಬರು ಪ್ರಮುಖ ಆಟಗಾರರು ಏಕದಿನ ಹಾಗೂ ಟಿ20 ಸರಣಿಯಿಂದ ಔಟಾಗಿರುವಾಗ ಮತ್ತೊಬ್ಬ ಬ್ಯಾಟ್ಸ್’ಮೆನ್ ಕಂ ವಿಕೇಟ್ ಕೀಪರ್ ಕ್ವಿಂಟನ್ ಡಿಕಾಕ್ ಗಾಯದಿಂದಾಗಿ 2 ಬಗೆಯ ಸರಣಿಯಿಂದ ಹಿಂದೆ ಸರಿದಿದ್ದಾರೆ. ನೆಟ್'ನಲ್ಲಿ ಅಭ್ಯಾಸ ಮಾಡುವಾಗ ಡಿಕಾಕ್ ಅವರಿಗೆ ಎಡಮೊಣಕಟ್ಟಿಗೆ ಗಾಯವಾದ ಕಾರಣ 4 ವಾರಗಳ ವಿಶ್ರಾಂತಿ ಅಗತ್ಯವಿದೆ'ಎಂದು ವ್ಯದ್ಯರು ಸಲಹೆ ನೀಡಿದ್ದಾರೆ.

ಡು ಪ್ಲೆಸಿಸ್ ಸಂಪೂರ್ಣ ಸರಣಿಗೆ ಲಭ್ಯರಿಲ್ಲ. ಎಬಿಡಿ 4ನೇ ಪಂದ್ಯದಿಂದ ಆಡಲಿದ್ದು ಪೂರ್ಣವಾಗಿ ಫೀಲ್ಡಿಗಿಳಿಯುವುದು ಇನ್ನು ಖಚಿತವಿಲ್ಲ. ಪ್ರವಾಸದಲ್ಲಿರುವ ಭಾರತ ತಂಡದಲ್ಲಿ ಯಾವುದೇ ಬದಲಾವಣೆಯಿಲ್ಲ.