5 ಸೆಟ್‌'ಗಳ ಬದಲಾಗಿ ಪಂದ್ಯಗಳು 3 ಸೆಟ್‌'ಗಳು ನಡೆಯಲಿದ್ದು, ಪಂದ್ಯ 3 ದಿನಗಳ ಬದಲಾಗಿ ಇನ್ಮುಂದೆ ಕೇವಲ 2 ದಿನ ಮಾತ್ರ ನಡೆಯಲಿದೆ.
ಲಂಡನ್(ಅ.07): ಟೆನಿಸ್'ನ ವಿಶ್ವಕಪ್ ಎಂದೇ ಕರೆಸಿಕೊಳ್ಳುವ ಡೇವಿಸ್ ಕಪ್'ನ ನಿಯಮಗಳು ಬದಲಾಗಿವೆ.
2018ರಿಂದ ಹೊಸ ನಿಯಮಗಳು ಜಾರಿಗೆ ಬರಲಿದ್ದು, ಕೇವಲ ಗುಂಪು 1 ಹಂತದ ಪಂದ್ಯಗಳಿಗೆ ಮಾತ್ರ ನಿಯಮಗಳು ಅನ್ವಯವಾಗಲಿದ್ದು, ವಿಶ್ವ ಗುಂಪಿನ ಪಂದ್ಯಗಳು ಹಳೆ ನಿಯಮದಂತೆಯೇ ನಡೆಯಲಿದೆ.
5 ಸೆಟ್'ಗಳ ಬದಲಾಗಿ ಪಂದ್ಯಗಳು 3 ಸೆಟ್'ಗಳು ನಡೆಯಲಿದ್ದು, ಪಂದ್ಯ 3 ದಿನಗಳ ಬದಲಾಗಿ ಇನ್ಮುಂದೆ ಕೇವಲ 2 ದಿನ ಮಾತ್ರ ನಡೆಯಲಿದೆ. ಮೊದಲ ದಿನ 2 ಸಿಂಗಲ್ಸ್, 2ನೇ ದಿನ 1 ಡಬಲ್ಸ್ ಹಾಗೂ 2 ರಿವರ್ಸ್ ಸಿಂಗಲ್ಸ್ ಪಂದ್ಯಗಳು ನಡೆಯಲಿವೆ. ತಂಡವೊಂದು 5 ಆಟಗಾರರನ್ನು ಆಡಿಸಲು ಅವಕಾಶವಿದ್ದು, ಒಂದೊಮ್ಮೆ ನಾಲ್ಕೇ ಪಂದ್ಯಕ್ಕೆ ಫಲಿತಾಂಶ ನಿರ್ಧಾರವಾದರೆ, 5ನೇ ಪಂದ್ಯವನ್ನು ನಡೆಸುವ ಅವಶ್ಯಕತೆ ಇಲ್ಲ
