ಡೇವಿಸ್ ಕಪ್: ಪಾಕಿಸ್ತಾನಕ್ಕೆ ಭಾರತ ತಂಡ?
ಬರೋಬ್ಬರಿ 55 ವರ್ಷಗಳ ಬಳಿಕ ಭಾರತದ ಡೆವೀಸ್ ಕಪ್ ತಂಡ ನೆರೆಯ ಪಾಕಿಸ್ತಾನದಲ್ಲಿ ಟೆನಿಸ್ ಆಡಲು ಸಜ್ಜಾಗಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ..
ನವದೆಹಲಿ[ಜೂ.27]: ಭಾರತ ಡೇವಿಸ್ ಕಪ್ ತಂಡ 55 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ತೆರಳುವ ಸಾಧ್ಯತೆ ಇದೆ.
ಇಂಡೋ-ಪಾಕ್ ಟೆನ್ಶನ್: ಭಾರತದಿಂದ ಟೆನಿಸ್ ಟೂರ್ನಿಗಳು ಸ್ಥಳಾಂತರ!
‘ಕೇಂದ್ರ ಸರ್ಕಾರಕ್ಕೆ ನಾವು ಪತ್ರ ಬರೆದಿದ್ದೇವೆ. ಇದು ದ್ವಿಪಕ್ಷೀಯ ಸರಣಿ ಅಲ್ಲ. ವಿಶ್ವಕಪ್ ಪಂದ್ಯವಾಗಿರುವ ಕಾರಣ ಅನುಮತಿ ನೀಡುವ ನಿರೀಕ್ಷೆ ಇದೆ’ ಎಂದು ಬುಧವಾರ ಅಖಿಲ ಭಾರತ ಟೆನಿಸ್ ಫೆಡರೇಷನ್ (ಎಐಟಿಎ) ಕಾರ್ಯದರ್ಶಿ ಹಿರಣ್ಮೋಯ್ ಚಟರ್ಜಿ ಹೇಳಿದ್ದಾರೆ.
ಡೇವಿಸ್ ಕಪ್ : ಇಟಲಿ ವಿರುದ್ಧ ಭಾರತಕ್ಕೆ ಸೋಲು
ಸೆಪ್ಟೆಂಬರ್‌ನಲ್ಲಿ ಏಷ್ಯಾ/ಓಷಿಯಾನಿಯಾ ಗುಂಪು 1 ಹಂತದ ಪಂದ್ಯ ಇಸ್ಲಾಮಾಬಾದ್‌ನಲ್ಲಿ ನಿಗದಿಯಾಗಿದ್ದು, ಭಾರತ ಈ ಮುಖಾಮುಖಿಯಲ್ಲಿ ಗೆಲುವು ಸಾಧಿಸಿದರೆ ವಿಶ್ವ ಗುಂಪು ಅರ್ಹತಾ ಸುತ್ತಿಗೆ ಪ್ರವೇಶ ಪಡೆಯಲಿದೆ. ಭಾರತ ಟೆನಿಸ್ ತಂಡ 1964ರ ಮಾರ್ಚ್’ನಲ್ಲಿ ಕೊನೆ ಬಾರಿಗೆ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು.