Asianet Suvarna News Asianet Suvarna News

ಡೇವಿಸ್‌ ಕಪ್‌ : ಇಟಲಿ ವಿರುದ್ಧ ಭಾರತಕ್ಕೆ ಸೋಲು

ಡೇವಿಸ್‌ ಕಪ್‌ ಅರ್ಹತಾ ಸುತ್ತುನಲ್ಲಿ ಭಾರತ ಮುಗ್ಗರಿಸಿದೆ. ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದ್ದ ಭಾರತ ಇಟಲಿ ವಿರುದ್ಧಸೋಲು ಕಂಡಿದೆ. ಸೋಲಿಗೆ ಮಹೇಶ್ ಭೂಪತಿ ಬೇಸರ ವ್ಯಕ್ತಪಡಿಸಿದ್ದಾರೆ.
 

Davis Cup 2019 India eliminated after Prajnesh loose
Author
Bengaluru, First Published Feb 3, 2019, 7:57 AM IST
  • Facebook
  • Twitter
  • Whatsapp

ಕೋಲ್ಕತಾ(ಫೆ.03): ಡೇವಿಸ್‌ ಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ ಇಟಲಿ ವಿರುದ್ಧ ಭಾರತ 1-3ರಲ್ಲಿ ಸೋಲುಂಡಿದೆ. ಇದರೊಂದಿಗೆ ವಲಯ ಹಂತಕ್ಕೆ ಹಿಂಬಡ್ತಿ ಪಡೆದಿದೆ. ಇಟಲಿ ಚೊಚ್ಚಲ ಡೇವಿಸ್‌ ಕಪ್‌ ಫೈನಲ್ಸ್‌ಗೆ ಪ್ರವೇಶ ಪಡೆದಿದೆ.

ಇದನ್ನೂ ಓದಿ: 5ನೇ ಏಕದಿನ: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ-ತಂಡದಲ್ಲಿ 3 ಬದಲಾವಣೆ!

ಪಂದ್ಯದ ಮೊದಲ ದಿನವಾದ ಶುಕ್ರವಾರ ಮೊದಲೆರಡು ಸಿಂಗಲ್ಸ್‌ಗಳಲ್ಲಿ ಸೋಲುಂಡಿದ್ದ ಭಾರತ 0-2ರ ಹಿನ್ನಡೆ ಅನುಭವಿಸಿತ್ತು. ಶನಿವಾರ ನಡೆದ ಡಬಲ್ಸ್‌ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿತು. ರೋಹನ್‌ ಬೋಪಣ್ಣ ಹಾಗೂ ದಿವಿಜ್‌ ಶರಣ್‌ 4-6, 6-3, 6-4 ಸೆಟ್‌ಗಳಲ್ಲಿ ಸಿಮೋನ್‌ ಬೊಲ್ಲೆಲಿ ಹಾಗೂ ಮಾಟ್ಟಿಯೋ ಬೆರ್ರೆಟ್ಟಿನಿ ಜೋಡಿ ವಿರುದ್ಧ ಗೆಲುವು ಸಾಧಿಸಿ, ಭಾರತವನ್ನು ಸ್ಪರ್ಧೆಯಲ್ಲಿ ಉಳಿಸಿದರು. 

ಇದನ್ನೂ ಓದಿ: ರಣಜಿ ಟ್ರೋಫಿ: ವಿದರ್ಭ-ಸೌರಾಷ್ಟ್ರ ಫೈನಲ್‌ ಫೈಟ್!

ಆದರೆ ರಿವರ್ಸ್‌ ಸಿಂಗಲ್ಸ್‌ನಲ್ಲಿ ವಿಶ್ವ ನಂ.37 ಆ್ಯಂಡ್ರೆಸ್‌ ಸೆಪ್ಪಿ ವಿರುದ್ಧ ಭಾರತದ ನಂ.1 ಪ್ರಜ್ನೇಶ್‌ ಗುಣೇಶ್ವರನ್‌ 1-6, 4-6 ನೇರ ಸೆಟ್‌ಗಳಲ್ಲಿ ಪರಾಭವಗೊಂಡರು. ಸಿಂಗಲ್ಸ್‌ನಲ್ಲೂ ಪ್ರಜ್ನೇಶ್‌ ನಿರಾಸೆ ಮೂಡಿಸಿದ್ದರು. ಕೇವಲ 62 ನಿಮಿಷಗಳಲ್ಲಿ ಪಂದ್ಯ ಗೆದ್ದ ಸೆಪ್ಪಿ, ಇಟಲಿಯನ್ನು ಫೈನಲ್ಸ್‌ಗೇರಿಸಿದರು. ಸೋಲಿನ ಬಳಿಕ ಭಾರತ ತಂಡದ ನಾಯಕ ಮಹೇಶ್‌ ಭೂಪತಿ ಬೇಸರ.
 

Follow Us:
Download App:
  • android
  • ios