ಅರ್ಹತಾ ಸುತ್ತಿನಲ್ಲಿ 84.22 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ದಾವಿಂದರ್ ಫೈನಲ್ ಪ್ರವೇಶಿಸಿದ್ದರು.

ಲಂಡನ್(ಆ.13): ಭಾರತದ ಜಾವೆಲಿನ್ ಎಸೆತಗಾರ ದಾವಿಂದರ್ ಸಿಂಗ್ ಕಾಂಗ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌'ಶಿಪ್‌'ನ ಫೈನಲ್‌'ನಲ್ಲಿ 13ನೇ ಸ್ಥಾನ ಪಡೆಯುವ ಮೂಲಕ ನಿರಾಸೆ ಅನುಭವಿಸಿದರು.

ಶನಿವಾರ ತಡರಾತ್ರಿ ನಡೆದ ಫೈನಲ್ ವೇಳೆ ಮೊದಲ ಯತ್ನದಲ್ಲಿ 75.40 ಮೀಟರ್ ದೂರಕ್ಕೆ ಜಾವೆಲಿನ್ ಎಸೆದ ದಾವಿಂದರ್, ಎರಡನೇ ಸುತ್ತಿನಲ್ಲಿ ಕರಾರುವಕ್ಕಾಗಿ ಎಸೆಯಲು ವಿಫಲವಾದರು. ಇನ್ನು ಮೂರನೇ ಸುತ್ತಿನಲ್ಲಿ 80.02 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯಲಷ್ಟೇ ದವಿಂದರ್ ಶಕ್ತರಾದರು. ಇದರೊಂದಿಗೆ ವಿಶ್ವ ಚಾಂಪಿಯನ್‌ಶಿಪ್‌'ನ ಜಾವೆಲಿನ್ ವಿಭಾಗದಲ್ಲಿ ಮೊದಲ ಬಾರಿ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದ ದಾವಿಂದರ್ ಪ್ರಶಸ್ತಿ ಜಯಿಸುವಲ್ಲಿ ವಿಫಲವಾದರು.

ಅರ್ಹತಾ ಸುತ್ತಿನಲ್ಲಿ 84.22 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ದಾವಿಂದರ್ ಫೈನಲ್ ಪ್ರವೇಶಿಸಿದ್ದರು.

ಜರ್ಮನಿಯ ಜೋಹಾನ್ಸ್ ವೆಟರ್ 89.89 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದರೆ, 89.73 ಮೀ. ಎಸೆದ ಜೆಕ್ ಗಣರಾಜ್ಯದ ಡ್ಯು ಜಾಕುಬ್ ವ್ಯಾಡ್ಲೆಜ್ ಹಾಗೂ ಪೆಟ್ರ ಫ್ರೈಡ್ರೈಚ್ 88.32 ಮೀ ಎಸೆಯುವ ಮೂಲಕ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ತಮ್ಮದಾಗಿಸಿಕೊಂಡರು.