Asianet Suvarna News Asianet Suvarna News

ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಶಿಕ್ಷೆಯ ನಂತರ ವಾರ್ನ'ರ್' ಸ್ಮಿತ್'ಗೆ ಐಪಿಎಲ್'ನಿಂದಲೂ ನಿಷೇಧ

ಇಬ್ಬರ ಆಟಗಾರರ ಬದಲಾಗಿ ಬೇರೆ ಆಟಗಾರರನ್ನು ನೇಮಿಸಿಕೊಳ್ಳುವುದಾಗಿ ಶುಕ್ಲಾ ಸುದ್ದಿಮಾಧ್ಯಮಗಳಿಗೆ ತಿಳಿಸಿದ್ದಾರೆ.  

David Warner steps down as captain of Sunrisers Hyderabad

ನವದೆಹಲಿ(ಮಾ.28): ಚಂಡನ್ನು ವಿರೂಪಗೊಳಿಸಿದ ಆರೋಪದ ಮೇಲೆ ಒಂದು ವರ್ಷ ನಿಷೇಧಕ್ಕೊಳಗಾಗಿರುವ  ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟಿವ್ ಸ್ಮಿತ್ ಹಾಗೂ ಉಪನಾಯಕ ಡೇವಿಡ್ ವಾರ್ನರ್'ಗೆ ಐಪಿಎಲ್ ಮಂಡಳಿ ಕೂಡ ಶಾಕ್ ನೀಡಿದೆ.

ಐಪಿಎಲ್'ನ 2018ರ 11ನೆ ಆವೃತ್ತಿಯಿಂದ ಇಬ್ಬರು ಆಟಗಾರರು ಆಡಡಂದೆ ನಿಷೇಧಿಸಿರುವುದಾಗಿ ಐಪಿಎಲ್'ನ ಆಯುಕ್ತ ರಾಜೀವ್ ಶುಕ್ಲಾ ತಿಳಿಸಿದ್ದಾರೆ. ಇಬ್ಬರ ಆಟಗಾರರ ಬದಲಾಗಿ ಬೇರೆ ಆಟಗಾರರನ್ನು ನೇಮಿಸಿಕೊಳ್ಳುವುದಾಗಿ ಶುಕ್ಲಾ ಸುದ್ದಿಮಾಧ್ಯಮಗಳಿಗೆ ತಿಳಿಸಿದ್ದಾರೆ.  

ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಸ್ಥಾನದಿಂದ ಕೈಬಿಡಲಾಗಿದ್ದು ಹೊಸ ನಾಯಕನನ್ನು ಶೀಘ್ರದಲ್ಲಿಯೇ ಆಯ್ಕೆ ಮಾಡುವುದಾಗಿ ತಂಡದ ಸಿಇಒ ಕೆ.ಶನ್ಮುಗಮ್ ಟ್ವೀಟ್'ನಲ್ಲಿ ತಿಳಿಸಿದ್ದರು. ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಸಾರಥ್ಯ ವಹಿಸುವ ಸಾಧ್ಯತೆಯಿದೆ. 2014ರಲ್ಲಿ ಧವನ್ ಹೈದರಾಬಾದ್'ನ ನಾಯಕರಾಗಿದ್ದರು.

ವಾರ್ನರ್ ಅವರನ್ನು 2014ರಲ್ಲಿ ಐಪಿಎಲ್ ಹರಾಜಿನಲ್ಲಿ 5.5 ಕೋಟಿ ರೂ. ಮೊತ್ತಕ್ಕೆ ಹೈದರಾಬಾದ್ ತಂಡ ಖರೀದಿಸಿತ್ತು. 2016ರಲ್ಲಿ ನಾಯಕರನ್ನಾಗಿ ನೇಮಿಸಲಾಗಿತ್ತು. 2016ರಲ್ಲಿ ಐಪಿಎಲ್ ಫೈನಲ್ ಪಂದ್ಯದಲ್ಲಿ  ಆರ್'ಸಿಬಿಯನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಸನ್ ರೈಸರ್ಸ್ ಪರವಾಗಿ ವಾರ್ನ್'ರ್ 4 ಆವೃತ್ತಿಗಳಿಂದ 2579 ರನ್ ಪೇರಿಸಿದ್ದಾರೆ. ಸ್ಟಿವ್ ಸ್ಮಿತ್ ಅವರನ್ನು 2 ದಿನಗಳ ಹಿಂದಷ್ಟೆ ರಾಜಸ್ಥಾನ್ ತಂಡದ ನಾಯಕ ಸ್ಥಾನದಿಂದ ಕೈಬಿಟ್ಟು ಅಜಿಂಕ್ಯ ರಹಾನೆ ಅವರನ್ನು ನೇಮಿಸಲಾಗಿತ್ತು.   

Follow Us:
Download App:
  • android
  • ios