ಸ್ಟೀವ್ ಸ್ಮಿತ್ ಅನುಪಸ್ಥಿತಿಯಲ್ಲಿ ಟಿ20 ಸರಣಿಯಲ್ಲಿ ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದರು.

ಹೈದರಾಬಾದ್(ಅ.15): ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಫೋಟಕ ಆರಂಭಿಕ ಆಟಗಾರ

ಡೇವಿಡ್ ವಾರ್ನರ್ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶವೊಂದನ್ನು ನೀಡಿ ತವರಿಗೆ ವಾಪಸಾಗಿದ್ದಾರೆ.

ವಾರ್ನರ್ ತಮ್ಮ ಇನ್‌'ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಹಾಕಿ ‘ನಮಗೆ ಆತಿಥ್ಯ ವಹಿಸಿದ್ದಕ್ಕೆ ಧನ್ಯವಾದ. ಭಾರತಕ್ಕೆ ಬಂದು ಕ್ರಿಕೆಟ್ ಆಡುವುದು ಎಂದರೆ ನಮಗೆ ತುಂಬಾ ಇಷ್ಟ. ಹೈದರಾಬಾದ್‌'ನಲ್ಲಿ ಪಂದ್ಯ ನಡೆಯದೆ ಇದ್ದಿದ್ದು ಬೇಸರ ಮೂಡಿಸಿತು. ಆದರೆ ಮುಂದಿನ ವರ್ಷ ನಿಮ್ಮೆಲ್ಲರನ್ನು ಮತ್ತೆ ಭೇಟಿಯಾಗುತ್ತೇನೆ’ ಎಂದು ಬರೆದಿದ್ದಾರೆ.

ಸ್ಟೀವ್ ಸ್ಮಿತ್ ಅನುಪಸ್ಥಿತಿಯಲ್ಲಿ ಟಿ20 ಸರಣಿಯಲ್ಲಿ ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದರು.