Asianet Suvarna News Asianet Suvarna News

ವಾರ್ನರ್ ಹೆಸರಿಗೆ ಮತ್ತೊಂದು ದಾಖಲೆ

ಈ ಮೊದಲು ಸುರೇಶ್ ರೈನಾ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಗೌತಮ್ ಗಭೀರ್ ನಾಲ್ಕು ಸಾವಿರ ರನ್ ಪೂರೈಸಿದ್ದಾರೆ.

David Warner brings up 4000 runs in IPL

ಬೆಂಗಳೂರು(ಮೇ.18): ಐಪಿಎಲ್‌'ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಆಟಗಾರರಲ್ಲಿ ಡೇವಿಡ್‌ ವಾರ್ನರ್‌ ಸಹ ಒಬ್ಬರು. ಕೋಲ್ಕತಾ ನೈಟ್‌ರೈಡ​ರ್ಸ್ ವಿರುದ್ಧ ಎಲಿಮಿನೇಟರ್‌ ಪಂದ್ಯದಲ್ಲಿ ವಾರ್ನರ್‌, ಐಪಿಎಲ್‌'ನಲ್ಲಿ 4000 ರನ್‌ ಪೂರೈಸಿದರು.

ಈ ಸಾಧನೆ ಮಾಡಿದ ಒಟ್ಟಾರೆ 5ನೇ ಹಾಗೂ ಮೊದಲ ವಿದೇಶಿ ಆಟಗಾರ ಎನ್ನುವ ದಾಖಲೆಯನ್ನು ವಾರ್ನರ್‌ ನಿರ್ಮಿಸಿದರು. ಈ ಮೊದಲು ಸುರೇಶ್ ರೈನಾ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಗೌತಮ್ ಗಭೀರ್ ನಾಲ್ಕು ಸಾವಿರ ರನ್ ಪೂರೈಸಿದ್ದಾರೆ.

ಮತ್ತೊಂದು ವಿಶೇಷ ಅಂದರೆ ಐವರ ಪೈಕಿ ಅತಿ ಕಡಿಮೆ ಪಂದ್ಯಗಳಲ್ಲಿ(114 ಪಂದ್ಯಗಳಲ್ಲಿ 4014) ಈ ಸಾಧನೆ ಮಾಡಿದ ಹಿರಿಮೆಗೆ ವಾರ್ನರ್‌ ಪಾತ್ರರಾದರು.

ಸುರೇಶ್ ರೈನಾ 161 ಪಂದ್ಯ 4540

ವಿರಾಟ್ ಕೊಹ್ಲಿ 149 ಪಂದ್ಯ 4418

ರೋಹಿತ್ ಶರ್ಮಾ 157 ಪಂದ್ಯ 4157

ಗೌತಮ್ ಗಂಭೀರ್ 147 ಪಂದ್ಯ 4088

Follow Us:
Download App:
  • android
  • ios