ಡೇವಿಡ್ ವಾರ್ನರ್ ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದ ವೇಳೆ ಕ್ರೀಡಾ ಸ್ಫೂರ್ತಿ ಮರೆದಿದ್ದಾರೆ.
ಗೆಲುವನ್ನು ದೊರಕಿಸಿ ಕೊಡುವುದರ ಜೊತೆ ಸನ್‌ರೈಸರ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದ ವೇಳೆ ಕ್ರೀಡಾ ಸ್ಫೂರ್ತಿ ಮರೆದಿದ್ದಾರೆ. ಚೆಂಡನ್ನು ಬೌಲ್ ಮಾಡಿ ಪಿಚ್ ಮೇಲೆ ಬಿದ್ದ ಎದುರಾಳಿ ಬೌಲರ್ ಬಸಿಲ್ ಥಂಪಿ ಅವರ ಶೂ ಕಳಚಿಬಿತ್ತು. ಸ್ಟ್ರೈಕರ್ ಬದಿಗೆ ಓಡುತ್ತಿದ್ದ ವಾರ್ನರ್, ಕೆಳಗೆ ಬಿದ್ದ ಶೂ ಅನ್ನು ಬೌಲರ್ ಕೈಗಿತ್ತು ಆನಂತರ ಓಟ ಮುಂದುವರಿಸಿದರು.
