ಲೆಹಮನ್ ಇನ್ನೂ 18 ತಿಂಗಳು ಆಸ್ಟ್ರೇಲಿಯ ತಂಡಕ್ಕೆ ಕೋಚ್ ಆಗಿರಲಿದ್ದಾರೆ. ಆಸ್ಟ್ರೇಲಿಯಾ ತಂಡದೊಟ್ಟಿಗೆ ಹೆಚ್ಚಾಗಿ ಪ್ರವಾಸ ಮಾಡಲು ನನಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೋಚ್ ಹುದ್ದೆಯಿಂದ ಕೆಳಗಿಳಿಯಲು ತೀರ್ಮಾನಿಸಿದ್ದೇನೆ ಎಂದು ಲೆಹಮಾನ್ ಹೇಳಿದ್ದಾರೆ.

ಮೆಲ್ಬರ್ನ್(ಡಿ.26): ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೋಚ್ ಡರೇನ್ ಲೆಹಮನ್, 2019ಕ್ಕೆ ತರಬೇತುದಾರ ಹುದ್ದೆಯಿಂದ ಕೆಳಗಿಳಿಯುವುದಾಗಿ ರೆಡಿಯೋ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಒಪ್ಪಂದದ ಪ್ರಕಾರ ಲೆಹಮನ್‌ರ ಕೋಚ್ ಅವಧಿ 2019ರ ವರೆಗೂ ಇದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನು ಮತ್ತೆ ಮುಂದುವರಿಸುವುದು ನನಗಿಷ್ಟವಿಲ್ಲ ಎಂದು ಲೆಹಮನ್ ಹೇಳಿದ್ದಾರೆ. ಲೆಹಮನ್ ಇನ್ನೂ 18 ತಿಂಗಳು ಆಸ್ಟ್ರೇಲಿಯ ತಂಡಕ್ಕೆ ಕೋಚ್ ಆಗಿರಲಿದ್ದಾರೆ. ಆಸ್ಟ್ರೇಲಿಯಾ ತಂಡದೊಟ್ಟಿಗೆ ಹೆಚ್ಚಾಗಿ ಪ್ರವಾಸ ಮಾಡಲು ನನಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೋಚ್ ಹುದ್ದೆಯಿಂದ ಕೆಳಗಿಳಿಯಲು ತೀರ್ಮಾನಿಸಿದ್ದೇನೆ ಎಂದು ಲೆಹಮಾನ್ ಹೇಳಿದ್ದಾರೆ.

2013ರ ಆ್ಯಷಸ್ ಟೆಸ್ಟ್ ಸರಣಿಯ ವೇಳೆ ಹಿಂದಿನ ಕೋಚ್ ಮಿಕ್ಕಿ ಆರ್ಥರ್ ಬದಲು ಲೆಹಮನ್‌'ರನ್ನು ಕೋಚ್ ಆಗಿ ನೇಮಿಸಲಾಗಿತ್ತು. ಲೆಹಮನ್ ಕೋಚ್ ಆದ ಬಳಿಕ ಆಸ್ಟ್ರೇಲಿಯಾ ತವರಿನಲ್ಲಿ 2 ಆ್ಯಷಸ್ ಸರಣಿ ಗೆದ್ದಿದ್ದರೆ, ಇಂಗ್ಲೆಂಡ್‌'ನಲ್ಲಿ 2 ಆ್ಯಷಸ್ ಸರಣಿಯಲ್ಲಿ ಸೋಲು ಕಂಡಿದೆ. 2015ರಲ್ಲಿ ಆಸ್ಟ್ರೇಲಿಯಾ ವಿಶ್ವಕಪ್ ಗೆದ್ದಿದ್ದು ಹೆಚ್ಚಿನ ಸಂತಸ ನೀಡಿದೆ ಎಂದು ಲೆಹಮನ್ ಹೇಳಿದ್ದಾರೆ.