ಸಾಮಾನ್ಯವಾಗಿ ಯೋಗಿಗಳು ಜಪ-ತಪಗಳಲ್ಲಿ ಕಾಲ ಕಳೆದರೆ ಅಂಥವರಿಗಿಂತ ತಾನು ಭಿನ್ನ ಎಂಬುದನ್ನು ಯೋಗ ಗುರು ಬಾಬಾ ರಾಮದೇವ್ ಆಗಾಗ್ಗೆ ತೋರ್ಪಡಿಸುತ್ತಲೇ ಇರುತ್ತಾರೆ! ಇತ್ತೀಚೆಗಷ್ಟೇ ದೆಹಲಿಯಲ್ಲಿ ನಡೆದ ಚಾರಿಟಿ ಪಂದ್ಯವೊಂದರಲ್ಲಿ ಫುಟ್ಬಾಲ್ ಆಡಿ ಗಮನ ಸೆಳೆದಿದ್ದ ರಾಮ್‌ದೇವ್, ಇದೀಗ ಕುಸ್ತಿ ಆಡಲು ಅದೂ 2008 ರ ಒಲಿಂಪಿಕ್ಸ್‌ನ ರಜತ ವಿಜೇತ ರಷ್ಯಾ ಕುಸ್ತಿಪಟು ಆಂಡ್ರೆ ಸ್ಟೆಡ್ನಿಕ್ ಜತೆಗೆ ತೊಡೆತಟ್ಟಲು ಸಜ್ಜಾಗಿದ್ದರು.

ನವದೆಹಲಿ (ಜ.18): ಸಾಮಾನ್ಯವಾಗಿ ಯೋಗಿಗಳು ಜಪ-ತಪಗಳಲ್ಲಿ ಕಾಲ ಕಳೆದರೆ ಅಂಥವರಿಗಿಂತ ತಾನು ಭಿನ್ನ ಎಂಬುದನ್ನು ಯೋಗ ಗುರು ಬಾಬಾ ರಾಮದೇವ್ ಆಗಾಗ್ಗೆ ತೋರ್ಪಡಿಸುತ್ತಲೇ ಇರುತ್ತಾರೆ! ಇತ್ತೀಚೆಗಷ್ಟೇ ದೆಹಲಿಯಲ್ಲಿ ನಡೆದ ಚಾರಿಟಿ ಪಂದ್ಯವೊಂದರಲ್ಲಿ ಫುಟ್ಬಾಲ್ ಆಡಿ ಗಮನ ಸೆಳೆದಿದ್ದ ರಾಮ್‌ದೇವ್, ಇದೀಗ ಕುಸ್ತಿ ಆಡಲು ಅದೂ 2008 ರ ಒಲಿಂಪಿಕ್ಸ್‌ನ ರಜತ ವಿಜೇತ ರಷ್ಯಾ ಕುಸ್ತಿಪಟು ಆಂಡ್ರೆ ಸ್ಟೆಡ್ನಿಕ್ ಜತೆಗೆ ತೊಡೆತಟ್ಟಲು ಸಜ್ಜಾಗಿದ್ದರು.

ಬುಧವಾರ ನವದೆಹಲಿಯಲ್ಲಿ ಮುಂಬೈ ಮತ್ತು ಪಂಜಾಬ್ ನಡುವಣದ ಪ್ರೊ ರೆಸ್ಲಿಂಗ್ ಲೀಗ್‌ನ ಸೆಮಿಫೈನಲ್‌ಗೂ ಮುನ್ನ ಈ ಕುಸ್ತಿ ನಡೆಯಲಿತ್ತೆಂದು ಸ್ಪೋರ್ಟ್ಸ್ ಕೀಡಾ ವರದಿ ಮಾಡಿತ್ತು.