ಮೊಹಾಲಿ[ಮೇ.03]: ಸ್ಯಾಮ್ ಕರ್ರನ್[55 ರನ್, 24 ಎಸೆತ] ಸಿಡಿಲಬ್ಬರದ ಅರ್ಧಶತಕ ಹಾಗೂ ವಿಕೆಟ್’ಕೀಪರ್ ಬ್ಯಾಟ್ಸ್’ಮನ್ ನಿಕೋಲಸ್ ಪೂರನ್[48] ಅರ್ಧಶತಕವಂಚಿತ ಬ್ಯಾಟಿಂಗ್ ನೆರವಿನಿಂದ ಕಿಂಗ್ಸ್ ಇಲೆವನ್ ಪಂಜಾಬ್ ತಂಡವು 183 ರನ್ ಬಾರಿಸಿದ್ದು ಕೋಲ್ಕತಾ ನೈಟ್’ರೈಡರ್ಸ್ ಪಡೆಗೆ ಸವಾಲಿನ ಗುರಿ ನೀಡಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕೋಲ್ಕತಾ ಕೇವಲ 22 ರನ್’ಗಳಿಸುವಷ್ಟರಲ್ಲೇ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದ್ದರು. ರಾಹುಲ್[2] ಹಾಗೂ ಗೇಲ್’ರನ್ನು ಸಂದೀಪ್ ವಾರಿಯರ್ ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಆ ಬಳಿಕ ಮೂರನೇ ವಿಕೆಟ್’ಗೆ ಜತೆಯಾದ ನಿಕೋಲಸ್ ಪೂರನ್ ಹಾಗೂ ಮಯಾಂಕ್ ಅಗರ್’ವಾಲ್ 69 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಮಯಾಂಕ್ 36 ರನ್ ಬಾರಿಸಿ ರನೌಟ್ ಆದರೆ, ನಿಕೋಲಸ್ ಪೂರನ್ ಕೇವಲ 27 ಎಸೆತಗಳಲ್ಲಿ 48 ರನ್ ಸಿಡಿಸಿ ರಾಣಾಗೆ ವಿಕೆಟ್ ಒಪ್ಪಿಸಿದರು. ಇನ್ನು ಕೊನೆಯಲ್ಲಿ ಅಬ್ಬರಿಸಿದ ಕರ್ರನ್ ಕೇವಲ 24 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 55 ರನ್ ಬಾರಿಸಿ ಅಜೇಯರಾಗುಳಿದರೆ, ಮನ್ದೀಪ್ 25 ರನ್ ಬಾರಿಸಿ ತಂಡದ ಮೊತ್ತ 150 ರನ್ ಗಡಿದಾಟಲು ನೆರವಾದರು.

ಕೋಲ್ಕತಾ ಪರ ಸಂದೀಪ್ ವಾರಿಯರ್ 2 ವಿಕೆಟ್ ಪಡೆದರೆ, ಗುರ್ನೆ, ರಸೆಲ್ ಮತ್ತು ರಾಣಾ ತಲಾ ಒಂದೊಂದು ವಿಕೆಟ್ ಪಡೆದರು. 

ಸಂಕ್ಷಿಪ್ತ ಸ್ಕೋರ್:

KXIP : 183/6
ಸ್ಯಾಮ್ ಕರ್ರನ್: 55*
ಸಂದೀಪ್ ವಾರಿಯರ್: 31/2
[* ಪಂಜಾಬ್ ಬ್ಯಾಟಿಂಗ್ ಮುಕ್ತಾಯದ ವೇಳೆಗೆ]