CSK ತಂಡದಲ್ಲಿ 30+ ಆಟಗಾರರೇ ಹೆಚ್ಚು..! 30 ವಯಸ್ಸು ದಾಟಿದ ಕ್ರಿಕೆಟಿಗರಿವರು

First Published 29, Jan 2018, 6:34 PM IST
CSK Team 30 Plus Aged Players List
Highlights

CSK ತಂಡದ 30+ ಆಟಗಾರರ ಆಯ್ಕೆಯನ್ನು ನೋಡಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾ ಇದು ಐಪಿಎಲ್ ತಂಡವೋ ಇಲ್ಲಾ ವೃದ್ದಾಶ್ರಮವೋ ಎಂದು ಟ್ವೀಟ್'ನಲ್ಲೇ ತಮಾಶೆ ಮಾಡಿದ್ದರು.

ಹೊಡಿಬಿಡಿ ಆಟಕ್ಕೆ ಹೆಸರಾಗಿರುವ ಟಿ20 ಕ್ರಿಕೆಟ್'ನಲ್ಲಿ ಯುವಕರೇ ಹೆಚ್ಚು ಮಿಂಚುವುದು ಸಾಮಾನ್ಯ. ಆದರೆ 2 ವರ್ಷಗಳ ನಿಷೇಧದ ಬಳಿಕ ಐಪಿಎಲ್'ಗೆ ಕಮ್'ಬ್ಯಾಕ್ ಮಾಡಿರುವ ಚೆನ್ನೈ ಸೂಪರ್'ಕಿಂಗ್ಸ್ ಬೇರೆಯದ್ದೇ ಐಡಿಯಾದೊಂದಿಗೆ ಕಣಕ್ಕಿಳಿಯುತ್ತಿದೆ.

ಹೌದು, ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಹೆಚ್ಚಾಗಿ 30 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಿಗೇ ಮಣೆ ಹಾಕಿದ್ದು ಅಚ್ಚರಿಗೆ ಕಾರಣವಾಗಿದೆ. ಸಿಎಸ್‌'ಕೆ ನಾಯಕ ಧೋನಿಗೆ (36), ತಾಹಿರ್ (38), ಹಭರ್ಜನ್ (37), ವಾಟ್ಸನ್ (36), ಬ್ರಾವೋ (34), ಡುಪ್ಲೆಸಿ (33), ಜಾಧವ್ (32), ರಾಯುಡು(32), ರೈನಾ (31), ಕರ್ಣ್ ಶರ್ಮಾ (30) ವಯಸ್ಸಾಗಿದೆ.

CSK ತಂಡದ 30+ ಆಟಗಾರರ ಆಯ್ಕೆಯನ್ನು ನೋಡಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾ ಇದು ಐಪಿಎಲ್ ತಂಡವೋ ಇಲ್ಲಾ ವೃದ್ದಾಶ್ರಮವೋ ಎಂದು ಟ್ವೀಟ್'ನಲ್ಲೇ ತಮಾಶೆ ಮಾಡಿದ್ದರು.

loader