ಕ್ರೀಡಾಭಿಮಾನಿಗಳು ತಮಗೆ ಇಷ್ಟವಾದ ಆಟಗಾರರು ಅಥವಾ ತಂಡದ ಮೇಲಿನ ಅಭಿಮಾನ ಮತ್ತು ಪ್ರೀತಿಯನ್ನು ಭಿನ್ನ ಶೈಲಿಯಲ್ಲಿ ತೋರುವ ಮೂಲಕ ಅಭಿಮಾನ ಮೆರೆಯುತ್ತಾರೆ. ಆದರೆ, ಇಲ್ಲೊಬ್ಬ ಮಧುಮಗ ಧೋನಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನ ಅಪ್ಪಟ್ಟ ಫ್ಯಾನ್ ವಿಶೇಷ ಅಭಿಮಾನ ಮೆರೆದಿದ್ದಾನೆ.

ಚೆನ್ನೈ, (ಸೆ.15): ಕ್ರೀಡಾಭಿಮಾನಿಗಳು ತಮಗೆ ಇಷ್ಟವಾದ ಆಟಗಾರರು ಅಥವಾ ತಂಡದ ಮೇಲಿನ ಅಭಿಮಾನ ಮತ್ತು ಪ್ರೀತಿಯನ್ನು ಭಿನ್ನ ಶೈಲಿಯಲ್ಲಿ ತೋರುವ ಮೂಲಕ ಅಭಿಮಾನ ಮೆರೆಯುತ್ತಾರೆ. ಆದರೆ, ಇಲ್ಲೊಬ್ಬ ಮಧುಮಗ ಧೋನಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನ ಅಪ್ಪಟ್ಟ ಫ್ಯಾನ್ ವಿಶೇಷ ಅಭಿಮಾನ ಮೆರೆದಿದ್ದಾನೆ.

 ಧೋನಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನ ಅಪ್ಪಟ್ಟ ಅಭಿಮಾನಿ ಆಗಿರುವ ಕೆ. ವಿನೋದ್ ಎನ್ನುವಾತ ತನ್ನ ಮದುವೆ ಲಘ್ನ ಪತ್ರಿಕೆಯಲ್ಲಿ ತನ್ನ ನೆಚ್ಚಿನ ಸಿಎಸ್‌ಕೆ ತಂಡದ ಲಾಂಛನ ಪ್ರಕಟಿಸಿ ಅಭಿಮಾನ ಮೆರೆದಿದ್ದಾರೆ. ಅಷ್ಟೇ ಅಲ್ಲದೇ ಸಿಎಸ್‌ಕೆ ಟೀಂನ ಟಿಕೆಟ್ ಮಾದರಿಯಲ್ಲಿ ತಮ್ಮ ಮದುವೆ ಕಾರ್ಡ್ ಪ್ರಿಂಟ್ ಮಾಡಿಸಿದ್ದಾರೆ. 

‘ಧೋನಿ ಮತ್ತು ಸಿಎಸ್‌ಕೆಯ ಅಪ್ಪಟ ಅಭಿಮಾನಿಯಾಗಿರುವ ನನಗೆ, ನನ್ನ ಮದುವೆ ಲಘ್ನ ಪತ್ರಿಕೆಯನ್ನು ವಿಶೇಷವಾಗಿ ಪ್ರಕಟಿಸಬೇಕು ಎನಿಸಿತು. ಅದಕ್ಕಾಗಿ ಲಘ್ನಪತ್ರಿಕೆಯಲ್ಲಿಯೇ ಸಿಎಸ್‌ಕೆ ಹೆಸರು ಬಳಸಿದೆ’ ಎಂದು ವಿನೋದ್ ಹೇಳಿದ್ದಾರೆ. ಲಘ್ನ ಪತ್ರಿಕೆಯಲ್ಲಿ ಚೆನ್ನೈ ಸೂಪರ್ ಕಿಂಗ್‌ರೊಂದಿಗೆ ಕ್ವೀನ್ ಎಂದು ತಮ್ಮ ಹೆಸರುಗಳೊಂದಿಗೆ ಪ್ರಕಟಿಸಿದ್ದಾರೆ.