ಪೀಲೆ 92 ಪಂದ್ಯಗಳಲ್ಲಿ ಒಟ್ಟು 77 ಗೋಲುಗಳನ್ನು ಬಾರಿಸಿದ್ದರು. ರೊನಾಲ್ಡೊ ಒಟ್ಟು 144 ಪಂದ್ಯಗಳಿಂದ 78 ಗೋಲು ದಾಖಲಿಸಿದ್ದಾರೆ.

ಪೋರ್ಟೊ(ಸೆ.01): ಅಂತಾರಾಷ್ಟ್ರೀಯ ಫುಟ್ಬಾಲ್‌'ನಲ್ಲಿ ಗರಿಷ್ಠ ಗೋಲು ಗಳಿಸಿದ ಆಟಗಾರರ ಪಟ್ಟಿಯಲ್ಲಿ ಪೋರ್ಚುಗಲ್‌'ನ ಕ್ರಿಸ್ಟಿಯಾನೊ ರೊನಾಲ್ಡೊ, ಬ್ರೆಜಿಲ್ ದಿಗ್ಗಜ ಪೀಲೆ ಅವರನ್ನು ಹಿಂದಿಕ್ಕಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯುರೋಪಿಯನ್ ವಿಶ್ವಕಪ್ ಅರ್ಹತಾ ಸುತ್ತಿನ ಫೆರೊಯಿ ಐಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ರೊನಾಲ್ಡೊ ಹ್ಯಾಟ್ರಿಕ್ ಗೋಲು ಬಾರಿಸಿದರು.

ಪೀಲೆ 92 ಪಂದ್ಯಗಳಲ್ಲಿ ಒಟ್ಟು 77 ಗೋಲುಗಳನ್ನು ಬಾರಿಸಿದ್ದರು. ರೊನಾಲ್ಡೊ ಒಟ್ಟು 144 ಪಂದ್ಯಗಳಿಂದ 78 ಗೋಲು ದಾಖಲಿಸಿದ್ದಾರೆ. ಅತಿಹೆಚ್ಚು ಗೋಲು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಪೋರ್ಚುಗಲ್ ನಾಯಕ ಸದ್ಯ ಜಂಟಿ 5ನೇ ಸ್ಥಾನದಲ್ಲಿದ್ದಾರೆ.

149 ಪಂದ್ಯಗಳಿಂದ 109 ಗೋಲು ಗಳಿಸಿರುವ ಇರಾನ್‌'ನ ಅಲಿ ದಯಿ ಗರಿಷ್ಟ ಗೋಲು ದಾಖಲಿಸಿದ ಪಟ್ಟಿಯಲ್ಲಿ ಅಗ್ರ ಸ್ಥಾನ ಹೊಂದಿದ್ದಾರೆ.