2003ರಲ್ಲಿ ಕಂಪನಿಯೊಂದಿಗೆ ಕೈ ಜೋಡಿಸಿದ್ದಾಗಿನಿಂದಲೂ ಸ್ಪೇನ್‌ನ ಈ ಆಟಗಾರ ನೈಕಿ ಕಂಪನಿಯ ಕ್ರೀಡಾ ಪರಿಕರಗಳನ್ನೇ ಧರಿಸುತ್ತಿದ್ದರು. ಇದೀಗ, ಸಂಸ್ಥೆಯೊಂದಿಗಿನ ತಮ್ಮ ಒಪ್ಪಂದ ಮುಂದುವರಿಸಿರುವ ಬಗ್ಗೆ ರೊನಾಲ್ಡೊ ತೃಪ್ತಿ ವ್ಯಕ್ತಪಡಿಸಿದ್ದಾರೆ.
ಮಾಡ್ರಿಡ್(ನ.09): ಕ್ರೀಡಾ ಪರಿಕರಗಳ ಉತ್ಪಾದನಾ ಸಂಸ್ಥೆ ನೈಕಿ ಹಾಗೂ ಖ್ಯಾತ ಫುಟ್ಬಾಲ್ ಆಟಗಾರ ಕ್ರಿಶ್ಚಿಯಾನೊ ರೊನಾಲ್ಡೊ ತಮ್ಮ ನಡುವಿನ ದೀರ್ಘಾವಧಿಯ ಪ್ರಾಯೋಜಕತ್ವ ಒಪ್ಪಂದವನ್ನು ವಿಸ್ತರಿಸಿದ್ದಾರೆ. ಆದರೆ, ವಿಸ್ತರಣೆ ಅವಧಿಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
2003ರಲ್ಲಿ ಕಂಪನಿಯೊಂದಿಗೆ ಕೈ ಜೋಡಿಸಿದ್ದಾಗಿನಿಂದಲೂ ಸ್ಪೇನ್ನ ಈ ಆಟಗಾರ ನೈಕಿ ಕಂಪನಿಯ ಕ್ರೀಡಾ ಪರಿಕರಗಳನ್ನೇ ಧರಿಸುತ್ತಿದ್ದರು. ಇದೀಗ, ಸಂಸ್ಥೆಯೊಂದಿಗಿನ ತಮ್ಮ ಒಪ್ಪಂದ ಮುಂದುವರಿಸಿರುವ ಬಗ್ಗೆ ರೊನಾಲ್ಡೊ ತೃಪ್ತಿ ವ್ಯಕ್ತಪಡಿಸಿದ್ದಾರೆ.
ಕ್ರಿಶ್ಚಿಯಾನೊ ರೊನಾಲ್ಡೊ ರಿಯಲ್ ಮ್ಯಾಡ್ರೀಡ್ ಪರ 360 ಪಂದ್ಯಗಳನ್ನು ಆಡಿ 372 ಗೋಲುಗಳನ್ನು ಬಾರಿಸಿದ್ದಾರೆ.
ಇತ್ತೀಚೆಗಷ್ಟೇ, ರೊನಾಲ್ಡೊ ಅವರೊಂದಿಗೆ ರಿಯಲ್ ಮ್ಯಾಡ್ರಿಡ್ ತಂಡವು ತಾನು ಹೊಂದಿರುವ ಒಪ್ಪಂದವನ್ನು 2021ರವರೆಗೆ ಮುಂದುವರಿಸಿತ್ತು.
