ಸಿಡ್ನಿ(ಜ.01): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್. ಇದೇ ಕೊಹ್ಲಿ ಕ್ರಿಕೆಟ್‌ಗಾಗಿ ಅತ್ತಿದ್ದರು. ಹೌದು, ಬಾಲ್ಯದಲ್ಲಿ ವಿರಾಟ್ ಕೊಹ್ಲಿ ಕ್ರಿಕೆಟ್‌ಗಾಗಿ ಅತ್ತಿದ್ದರು ಎಂದು ತಮ್ಮ ಆ್ಯಪ್ ಮೂಲಕ ರೋಚಕ ಕಹಾನಿಯನ್ನ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಮುಂಬೈ ಇಂಡಿಯನ್ಸ್‌ ಹೊಡೆತ- ರೋಹಿತ್‌ಗೆ ಶುರುವಾಯ್ತು ಟೆನ್ಶನ್!

ಬಾಲ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ನಿವಾಸದ ಪಕ್ಕದ ಹುಡುಗರ ಜೊತೆ ಕ್ರಿಕೆಟ್ ಆಡುತ್ತಿದ್ದರು. ಆದರೆ ಕೊಹ್ಲಿಗಿಂತ ಹಿರಿಯರಾಗಿದ್ದ ಅವರು ಕೊಹ್ಲಿಗೆ ಬ್ಯಾಟಿಂಗ್ ಅವಕಾಶವೇ ನೀಡುತ್ತಿರಲಿಲ್ಲ. ಕೊಹ್ಲಿ 8,9,10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿಯಲು ಸೂಚಿಸುತ್ತಿದ್ದರು. ಆದರೆ ಬ್ಯಾಟಿಂಗ್ ಅವಕಾಶ ಬಂದಾಗ ಇತರರು ಮನೆಗೆ ತೆರಳುತ್ತಿದ್ದರು. ಇದರಿಂದ ಬೇಸತ್ತ ಕೊಹ್ಲಿ ಅತ್ತಿದ್ದರು ಎಂದು ಆ್ಯಪ್ ಮೂಲಕ ಹೇಳಿದ್ದಾರೆ.

 

 

ಇದನ್ನೂ ಓದಿ: 2019ರಲ್ಲಿ ನಿರ್ಮಾಣವಾಗಲಿವೆ ಎಂದೆಂದೂ ಅಳಿಸಲಾಗದ 5 ದಾಖಲೆಗಳು..!

ಈ ಸಂದರ್ಭದಲ್ಲಿ ಕೊಹ್ಲಿ ಸಹೋದರ ಮಾಡಿಗ ಸಹಾಯವನ್ನೂ ನೆನಪಿಸಿಕೊಂಡಿದ್ದಾರೆ. ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಕೊಹ್ಲಿ ಸಹೋದರ, ಕೊಹ್ಲಿಯನ್ನ ಕ್ರಿಕೆಟ್ ಆಟಕ್ಕೆ ಕರೆದದೊಯ್ಯುತ್ತಿದ್ದರು. ನನಗೆ ಕ್ರಿಕೆಟ್ ಅವಕಾಶವನ್ನ ಮಾಡಿಕೊಡುತ್ತಿದ್ದ ಎಂದು ಕೊಹ್ಲಿ ಹೇಳಿದ್ದಾರೆ.