ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಹುಟ್ಟುಹಬ್ಬಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರು ಸೇರಿದಂತೆ ವಿದೇಶಿ ಕ್ರಿಕೆಟಿಗರು ಶುಭಾಶಯ ಕೋರಿದ್ದಾರೆ. ಇಲ್ಲಿದೆ ಕ್ರಿಕೆಟಿಗರ ಟ್ವೀಟ್.
ಮುಂಬೈ(ನ.02): ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಇಂದು 53ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕಿಂಗ್ ಖಾನ್ ಹುಟ್ಟು ಹಬ್ಬಕ್ಕೆ ಬಾಲಿವುಡ್ ಸೆಲೆಬ್ರೆಟಿಗಳ ಜೊತೆಗೆ ಕ್ರಿಕೆಟಿಗರು ಶುಭಾಶಯ ಕೋರಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಕೆರಿಬಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್ ತಂಡ ಹೊಂದಿರುವ ಶಾರೂಖ್ ಖಾನ್‌ಗೆ ಭಾರತದಲ್ಲಿ ಮಾತ್ರವಲ್ಲ ವಿದೇಶಿ ಕ್ರಿಕೆಟಿಗರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇದೀಗ ದೇಶ ವಿದೇಶ ಕ್ರಿಕೆಟಿಗರು ಶಾರುಖ್ ಖಾನ್‌ಗೆ ಶುಭಾಶಯ ಕೋರಿದ್ದಾರೆ.
