ಮುಂಬೈ ಮತ್ತು ಕೋಲ್ಕತ್ತಾದಲ್ಲಿ ರಣಜಿ ಪಂದ್ಯವಾಡುತ್ತಿರುವ ಗೋವಾ ಮತ್ತು ವಿದರ್ಭ ತಂಡಗಳಲ್ಲಿ ಹಣಕಾಸಿನ ಮುಗ್ಗಟ್ಟು ತಲೆದೋರಿದೆ. ತಂಡಗಳಿಗೆ ಕಾಂಪ್ಲಿಮೆಂಟರಿಯಾಗಿ ಬೆಳಗ್ಗೆ ತಿಂಡಿಯನ್ನು ಮಾತ್ರ ಕೊಡಲಾಗುತ್ತದೆ. ಉಳಿದ ಊಟದ ಖರ್ಚನ್ನೆಲ್ಲ ಅವರೇ ಭರಿಸಬೇಕು. ಆದರೆ ಕ್ರಿಕೆಟಿಗರ ಬಳಿ ನಗದು ಇಲ್ಲ, ಹಳೆಯ 500 ಮತ್ತು 1000 ರೂಪಾಯಿ ನೋಟುಗಳಿಗೆ ಚೇಂಜ್ ಸಿಗದೆ. ಪ್ರತಿದಿನ ಹೊರಗೆ ಹೋಗಿ ಕಾರ್ಡ್ ಸ್ವೈಪ್ ಮಾಡಿ ಊಟ ತಿಂಡಿ ಮಾಡುವುದು ಕೂಡ ಆಟಗಾರರಿಗೆ ಕಷ್ಟವಾಗಿದೆ.

ಕೋಲ್ಕತ್ತಾ(ನ.15): ಕಪ್ಪುಹಣ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕೈಗೊಂಡ ದಿಟ್ಟ ಕ್ರಮದಿಂದ ರಣಜಿ ಆಟಗಾರರು ಕೂಡ ಹಣವಿಲ್ಲದೆ ಕಂಗಾಲಾಗಿದೆ. 

Add Asianetnews Kannada as a Preferred SourcegooglePreferred

ಮುಂಬೈ ಮತ್ತು ಕೋಲ್ಕತ್ತಾದಲ್ಲಿ ರಣಜಿ ಪಂದ್ಯವಾಡುತ್ತಿರುವ ಗೋವಾ ಮತ್ತು ವಿದರ್ಭ ತಂಡಗಳಲ್ಲಿ ಹಣಕಾಸಿನ ಮುಗ್ಗಟ್ಟು ತಲೆದೋರಿದೆ. ತಂಡಗಳಿಗೆ ಕಾಂಪ್ಲಿಮೆಂಟರಿಯಾಗಿ ಬೆಳಗ್ಗೆ ತಿಂಡಿಯನ್ನು ಮಾತ್ರ ಕೊಡಲಾಗುತ್ತದೆ. ಉಳಿದ ಊಟದ ಖರ್ಚನ್ನೆಲ್ಲ ಅವರೇ ಭರಿಸಬೇಕು. ಆದರೆ ಕ್ರಿಕೆಟಿಗರ ಬಳಿ ನಗದು ಇಲ್ಲ, ಹಳೆಯ 500 ಮತ್ತು 1000 ರೂಪಾಯಿ ನೋಟುಗಳಿಗೆ ಚೇಂಜ್ ಸಿಗದೆ. ಪ್ರತಿದಿನ ಹೊರಗೆ ಹೋಗಿ ಕಾರ್ಡ್ ಸ್ವೈಪ್ ಮಾಡಿ ಊಟ ತಿಂಡಿ ಮಾಡುವುದು ಕೂಡ ಆಟಗಾರರಿಗೆ ಕಷ್ಟವಾಗಿದೆ.

ಇನ್ನೊಂದೆಡೆ ಈಡನ್ ಗಾರ್ಡನ್​ನಲ್ಲಿ ಮಹಾರಾಷ್ಟ್ರ ವಿರುದ್ಧ ಆಡುತ್ತಿರುವ ವಿದರ್ಭ ತಂಡದ ಆಟಗಾರರು ಕೂಡ ನಗದಿಲ್ಲದೆ ಪರದಾಡುತ್ತಿದ್ದಾರೆ. ಚಿಕ್ಕ ಮೊತ್ತದ ನಗದನ್ನು ಒದಗಿಸುವಂತೆ ಆಟಗಾರರು ಬಂಗಾಳ ಕ್ರಿಕೆಟ್ ಮಂಡಳಿಯ ಮೊರೆ ಹೋಗಿದ್ದಾರೆ.