ನವದೆಹಲಿ (ಜು.21): ಇತ್ತೀಚೆಗಷ್ಟೇ ಅಂ.ರಾ. ಕ್ರಿಕೆಟ್‌ ಹಾಗೂ ಐಪಿಎಲ್‌ನಿಂದ ನಿವೃತ್ತಿ ಪಡೆದಿದ್ದ ಭಾರತದ ಯುವರಾಜ್‌ ಸಿಂಗ್‌ಗೆ ವಿದೇಶಿ ಟಿ20 ಲೀಗ್‌ಗಳಲ್ಲಿ ಆಡಲು ಬಿಸಿಸಿಐ ಅನುಮತಿ ನೀಡಿದೆ.

ಕ್ರಿಕೆಟ್‌ಗೆ ವಿದಾಯ, ರಾಹುಲ್ ಟ್ವೀಟ್ ವೈರಲ್

ಕೆನಡಾದಲ್ಲಿ ನಡೆಯಲಿರುವ ಗ್ಲೋಬಲ್‌ ಟಿ20 ಲೀಗ್‌ನ ಯುವರಾಜ್‌ ಟೊರೊಂಟೊ ನ್ಯಾಷನಲ್ಸ್‌ ತಂಡದೊಂದಿಗೆ ಯುವಿ ಒಪ್ಪಂದ ಮಾಡಿಕೊಂಡಿದ್ದಾರೆ. ಜು.25ರಿಂದ ಆ.11ರ ವರೆಗೂ ಲೀಗ್‌ನ 2ನೇ ಆವೃತ್ತಿ ನಡೆಯಲಿದೆ. ಕಳೆದ ವಾರವಷ್ಟೇ ವಿದೇಶಿ ಲೀಗ್‌ಗಳಲ್ಲಿ ಆಡಲು ಅನುಮತಿ ಕೋರಿ ಯುವರಾಜ್‌ ಬಿಸಿಸಿಐಗೆ ಪತ್ರ ಬರೆದಿದ್ದರು. ಮುಂಬರುವ ದಿನಗಳಲ್ಲಿ ಇನ್ನೂ ಕೆಲ ಟಿ20 ಲೀಗ್‌ಗಳಲ್ಲಿ ಅವರು ಆಡುವ ನಿರೀಕ್ಷೆ ಇದೆ.

ವಿದೇಶಿ ತಂಡದ ಪರ ಆಡಲು ಅನುಮತಿ ಕೋರಿ, ಯುವರಾಜ್ ಸಿಂಗ್ BCCIಗೆ ಪತ್ರ ಬರೆದಿದ್ದರು.

ಯುವರಾಜ್ ಸಿಂಗ್ ಇಂಟರೆಸ್ಟಿಂಗ್ ಸಂಗತಿಗಳು