ಟೀಂ ಇಂಡಿಯಾ ಮಹಿಳಾ ತಂಡದ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಶ್ರೀ ಚಾಮರಾಜೇಂದ್ರ ಮೃಗಾಲಯದ ಚಿರತೆ ದತ್ತು ಸ್ವೀಕಾರ ಒಪ್ಪಂದವನ್ನ ನವೀಕರಿಸಿದ್ದಾರೆ. ಇಲ್ಲಿದೆ ವೇದಾ ಕೃಷ್ಣಮೂರ್ತಿಯ ಸಾಮಾಜಿಕ  ಕಳಕಳಿ ವಿವರ.

ಮೈಸೂರು(ಆ.26):  ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯದ ಚಿರತೆಯನ್ನು ದತ್ತು ಸ್ವೀಕಾರವನ್ನು ನವೀಕರಿಸಿಕೊಂಡಿದ್ದಾರೆ. ಈ ಮೂಲಕ ವೇದಾ ತಮ್ಮ ಸಾಮಾಜಿ ಕಾರ್ಯವನ್ನ ಮುಂದುವರಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವೇದಾ ₹35 ಸಾವಿರ ಪಾವತಿಸಿ ಭಾವನಾ ಎಂಬ ಹೆಸರಿನ ಚಿರತೆಯನ್ನು ಮುಂದಿನ ಸೆ.9 ರಿಂದ 2019ರ ಸೆ.8ರವರೆಗೆ ನವೀಕರಿಸಿರುವುದಕ್ಕಾಗಿ ಮೃಗಾಲಯವು ಅವರನ್ನು ಅಭಿನಂದಿಸಿದೆ. ಚಿರತೆ ದತ್ತು ಸ್ವೀಕಾರದ ನವೀಕರಣಕ್ಕೆ ವೇದಾ ಕೃಷ್ಣಮೂರ್ತಿ ತೋರಿಸುತ್ತಿರುವ ಆಸಕ್ತಿ ಪ್ರಶಂಸನೀಯ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಹೇಳಿದ್ದಾರೆ.

ಭಾರತ ತಂಡದ ಪ್ರಮುಖ ಆಟಗಾರ್ತಿಯಾಗಿ ಗುರುತಿಸಿಕೊಂಡಿರುವ ಕನ್ನಡತಿ ವೇದಾ ಕೃಷ್ಣಮೂರ್ತಿ, ಇತ್ತೀಚೆಗೆ ನಡೆದ ಚಾಲೆಂಜರ್ ಟಿ20 ಟ್ರೋಫಿ ಟೂರ್ನಿಯಲ್ಲಿ ಇಂಡಿಯಾ ಗ್ರೀನ್ ತಂಡವನ್ನ ಮುನ್ನಡೆಸಿದ್ದರು.