ದುಲೀಪ್ ಟ್ರೋಫಿಯ ಇಂಡಿಯಾ ಬ್ಲೂ ತಂಡದ ನಾಯಕರಾಗಿರುವ ರೈನಾ ಪಂದ್ಯವನ್ನಾಡುವ ಕಾರಣ ಗಾಜಿಯಾಬಾದ್'ನಿಂದ ಕಾನ್ಪುರಕ್ಕೆ ತಮ್ಮ ರೇಂಜ್ ರೋವರ್ ಕಾರಿನಲ್ಲಿ ತೆರಳುತ್ತಿದ್ದರು.

ಕಾನ್ಪುರ(ಸೆ.12): ಭಾರತೀಯ ಕ್ರಿಕೆಟ್ ತಂಡದ ಆಟಗಾರ ಸುರೇಶ್ ರೈನಾ ಅವರು ಚಾಲನೆ ಮಾಡುತ್ತಿದ್ದ ರೇಂಜ್ ರೋವರ್ ಕಾರು ಅಪಘಾತಕ್ಕೀಡಾಗಿ ಒಂದು ಟೈರ್ ಸ್ಫೋಟಗೊಂಡಿದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

ದುಲೀಪ್ ಟ್ರೋಫಿಯ ಇಂಡಿಯಾ ಬ್ಲೂ ತಂಡದ ನಾಯಕರಾಗಿರುವ ರೈನಾ ಪಂದ್ಯವನ್ನಾಡುವ ಕಾರಣ ಗಾಜಿಯಾಬಾದ್'ನಿಂದ ಕಾನ್ಪುರಕ್ಕೆ ತಮ್ಮ ರೇಂಜ್ ರೋವರ್ ಕಾರಿನಲ್ಲಿ ತೆರಳುತ್ತಿದ್ದರು. ಅತೀ ವೇಗವಾಗಿ ಕಾರನ್ನು ಚಾಲನೆ ಮಾಡುತ್ತಿದ್ದ ಕಾರಣ ಎತ್ವಾ ಎಂಬ ಪಟ್ಟಣದ ಬಳಿ ರಾತ್ರಿ 2 ಗಂಟೆಯ ವೇಳೆ ಕಾರ್'ನ ಟೈರ್ ಸ್ಫೋಟಗೊಂಡಿದೆ. ಅದೃಷ್ಟವಶಾತ್ ಆಟಗಾರನಿಗೆ ಯಾವುದೇ ಪ್ರಣಾಪಾಯವಾಗಿಲ್ಲ.

ಹೆಚ್ಚುವರಿ ಟೈರ್ ಇಲ್ಲದ ಕಾರಣ ಕಾರ್ ರಿಪೇರಿ ಮಾಡದೆ ರಾತ್ರಿಯಿಡಿ ರಸ್ತೆಯಲ್ಲೇ ಕಳೆಯುವಂತಾಗಿದೆ.ಅಲ್ಲಿದ್ದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ತದನಂತರ ರೈನಾ ಇನ್ನೊಂದು ವಾಹನದಲ್ಲಿ ಕಾನ್ಪುರಕ್ಕೆ ತೆರಳಿದ್ದಾರೆ.2015 ಅಕ್ಟೋಬರ್'ನಿಂದ ರೈನಾ ಏಕದಿನ ಪಂದ್ಯಗಳಲ್ಲಿ ಆಡುತ್ತಿಲ್ಲ. ಇತ್ತೀಚಿಗೆ ನಡೆದ ಶ್ರೀಲಂಕಾ ವಿರುದ್ಧದ ಸರಣಿ ಹಾಗೂ ಸೆ.17ರಿಂದ ಆರಂಭವಾಗುವ ಆಸ್ಟ್ರೇಲಿಯಾ ವಿರುದ್ಧ ಪಂದ್ಯಗಳಿಗೂ ಕೂಡ ಕಡೆಗಣಿಸಲಾಗಿದೆ.