ಕೇಪ್’ಟೌನ್[ಡಿ.02]: ನ್ಯೂಜಿಲೆಂಡ್ ತಂಡದ ಮಾಜಿ ಕ್ರಿಕೆಟಿಗ ನೇಥನ್ ಮೆಕಲಂ ಮೃತಪಟ್ಟಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಈ ಸುದ್ದಿ ಸುಳ್ಳು, ತಾವು ಇನ್ನು ಜೀವಂತವಾಗಿರುವುದಾಗಿ ನೇಥನ್ ಟ್ವೀಟ್ ಮಾಡುವ ಮೂಲಕ ಸ್ಪಷ್ಟಪಡಿಸಿದ್ದಾರೆ.

ಸಹೋದರ ಬ್ರೆಂಡನ್ ಮೆಕಲಂ ಅವರೊಂದಿಗೆ ಸೆಲ್ಫೀ ಕ್ಲಿಕ್ಕಿಸಿಕೊಂಡಿರುವ ಫೋಟೋವೊಂದನ್ನು ಅಪ್’ಲೋಡ್ ಮಾಡಿರುವ ಅವರು, ನಾನಿನ್ನು ಜೀವಂತವಾಗಿದ್ದೇನೆ, ಜತೆಗೆ ಹಿಂದೆಂದಿಗಿಂತಲೂ ಬಲಿಷ್ಠವಾಗಿದ್ದೇನೆ ಎಂದು ನೇಥನ್ ಟ್ವೀಟ್ ಮಾಡಿದ್ದಾರೆ.

2007ರಲ್ಲಿ ಕಿವೀಸ್ ತಂಡವನ್ನು ಕೂಡಿಕೊಂಡಿದ್ದ ನೇಥನ್, 84 ಏಕದಿನ ಹಾಗೂ 63 ಟಿ20 ಪಂದ್ಯಗಳಲ್ಲಿ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸಿದ್ದಾರೆ.