ಮೊಮ್ಮಗನ ಭೇಟಿ ಅಸಾಧ್ಯವಾದ ಕಾರಣ ಸಂತೋಕ್ ಸಿಂಗ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಅಹಮದಾಬಾದ್(ಡಿ.11): ಶುಕ್ರವಾರದಿಂದ ಕಾಣೆಯಾಗಿದ್ದ ಭಾರತ ಕ್ರಿಕೆಟ್ ತಂಡದ ವೇಗಿ ಜಸ್‌ಪ್ರೀತ್ ಬುಮ್ರಾರ, ಅಜ್ಜ ಸಂತೋಕ್ ಸಿಂಗ್ ಬುಮ್ರಾ (84) ಅವರ ಶವ ಇಲ್ಲಿನ ಸಬರಮತಿ ನದಿಯಲ್ಲಿ ಭಾನುವಾರ ಪತ್ತೆಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬುಮ್ರಾಗೆ ಜನ್ಮದಿನದ ಶುಭಾಶಯ ಕೋರಲು ಸಂತೋಕ್ ಡಿ.6ರಂದು ಅಹಮದಾಬಾದ್‌'ಗೆ ಆಗಮಿಸಿದ್ದರು. ಆದರೆ, ಕೌಟುಂಬಿಕ ಮನಸ್ತಾಪದ ಕಾರಣ ಬುಮ್ರಾರ ತಾಯಿ, ಅಜ್ಜ-ಮೊಮ್ಮಗನ ಭೇಟಿಗೆ ಅವಕಾಶ ಮಾಡಿಕೊಟ್ಟಿರಲಿಲ್ಲ ಎಂಬ ಆರೋಪ ಕೇಳಿಬಂದಿತ್ತು.

ಮೊಮ್ಮಗನ ಭೇಟಿ ಅಸಾಧ್ಯವಾದ ಕಾರಣ ಸಂತೋಕ್ ಸಿಂಗ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.