ಕ್ರಿಕೆಟಿಗರ ಆರ್ಥಿಕ ಸಹಾಯ- ಮಾಜಿ ಕ್ರಿಕೆಟಿಗ ಐಸಿಯುನಿಂದ ವಾರ್ಡ್‌ಗೆ ಶಿಫ್ಟ್!
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಜಾಕೊಬ್ ಮಾರ್ಟಿನ್ ಚೇತರಿಕೆ ಕಂಡಿದ್ದಾರೆ. ರಸ್ತೆ ಅಪಘಾತದಿಂದ ಆಸ್ಪತ್ರೆ ಸೇರಿದ ಮಾರ್ಟಿನ್ ಕಳೆದ ಒಂದು ತಿಂಗಳಿನಿಂದ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾರ್ಟಿನ್ ಆರೋಗ್ಯದ ಕುರಿತು ಮಾಹಿತಿ ಇಲ್ಲಿದೆ.
ಬರೋಡ(ಜ.30): ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸತತ ಒಂದು ತಿಂಗಳಿನಿಂದ ವೆಂಟಿಲೇಟರ್‌ನಲ್ಲಿ ಉಸಿರಾಡುತ್ತಿದ್ದ ಟೀಂ ಇಂಡಿಯಾ ಮಾಜಿ ಕ್ರಿಕೆಟಿ ಜಾಕೋಬ್ ಮಾರ್ಟಿನ್ ಇದೀಗ ತೀವ್ರ ನಿಘಾ ಘಟಕದಿಂದ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ. ಸದ್ಯ ಜಾಕೋಬ್ ಮಾರ್ಟಿನ್ ಚೇತರಿಸಿಕೊಂಡಿದ್ದು, ಕನಿಷ್ಠ 2 ರಿಂತ 3 ತಿಂಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ.
ಇದನ್ನೂ ಓದಿ: ಮಾಜಿ ಕ್ರಿಕೆಟಿಗನಿಗೆ ಅಪಘಾತ- ನೆರವಿಗೆ ದಾವಿಸಿದ ಟೀಂ ಇಂಡಿಯಾ ದಿಗ್ಗಜರು!
ಜಾಕೋಬ್ ಮಾರ್ಟಿನ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರುತ್ತಿದ್ದಂತೆ ಅವರ ಕುಟುಂಬ ಆರ್ಥಿಕ ಬಿಕ್ಕಟ್ಟು ಎದಿರಿಸಿತು. ಅಷ್ಟರಲ್ಲೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರು, ಬಿಸಿಸಿಐ ಸೇರಿದಂತೆ ಕ್ರಿಕೆಟ್ ವಲಯ ಆರ್ಥಿಕ ಸಹಾಯ ಮಾಡಿತು. ಬಿಸಿಸಿಐ 5 ಲಕ್ಷ ರೂಪಾಯಿ ನೀಡಿದರೆ, ಬರೋಡಾ ಕ್ರಿಕೆಟ್ ಸಂಸ್ಥೆ 3 ಲಕ್ಷ ರೂಪಾಯಿ ನೀಡಿತು. ಇನ್ನು ಸೌರವ್ ಗಂಗೂಲಿ ಕೂಡ ಆರ್ಥಿಕ ನೆರವು ನೀಡಿದರು.
ಇದನ್ನೂ ಓದಿ: ಕಷ್ಟದಲ್ಲಿರೋ ಮಾಜಿ ಕ್ರಿಕೆಟಿಗನಿಗೆ ಪಾಂಡ್ಯ ಬ್ಲ್ಯಾಂಕ್ ಚೆಕ್: ಆದ್ರೆ ಕಂಡೀಶನ್ ಅಪ್ಲೈ!
ಯುವ ಕ್ರಿಕೆಟಿಗ ಕ್ರುನಾಲ್ ಪಾಂಡ್ಯ ಕೂಡ ಸಹಾಯ ಹಸ್ತ ಚಾಚಿದರು. ಹೀಗೆ ಒಟ್ಟು 16 ಲಕ್ಷವ ರೂಪಾಯಿ ಹರಿದುಬಂದಿತ್ತು. ಸದ್ಯ ಆಸ್ಪತ್ರೆ ವೆಚ್ಚ 15 ಲಕ್ಷ ರೂಪಾಯಿ ದಾಟಿದೆ. ಇನ್ನು 3 ತಿಂಗಳ ಚಿಕಿತ್ಸೆಗೆ ಹೆಚ್ಚಿನ ಹಣ ಬೇಕಿದೆ ಎಂದು ಜಾಕೋಬ್ ಪತ್ನಿ ಖ್ಯಾತಿ ಹೇಳಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗರ ಸಹಾಯದಿಂದ ಪತಿ ಬದುಕಿ ಉಳಿದಿದ್ದಾರೆ ಎಂದು ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.
500 ರೂಪಾಯಿಯಿಂದ ಹಿಡಿದು ಲಕ್ಷ ರೂಪಾಯಿವರೆಗೆ ಸಹಾಯ ಮಾಡಿದ್ದಾರೆ. ಅವರ ಸಾಮರ್ಥ್ಯಕ್ಕೆ ತಕ್ಕಂತೆ ಎಲ್ಲರೂ ಆರ್ಥಿಕ ಸಹಾಯ ಮಾಡಿದ್ದಾರೆ. ಕಷ್ಟದಲ್ಲಿ ನಮ್ಮ ಜೊತೆಗೆ ನಿಂತಿದ್ದಾರೆ. ಇನ್ನು ಮುಂದೆಯೂ ಹೆಚ್ಚಿನ ಹಣದ ಅಗತ್ಯವಿದೆ ಎಂದು ಖ್ಯಾತಿ ಹೇಳಿದ್ದಾರೆ.