ದುಬೈ[ನ.06]: ನ.21ರಿಂದ ಡಿ.2ರವರೆಗೆ ಶಾರ್ಜಾದಲ್ಲಿ ನಡೆಯಲಿರುವ ಟಿ10 ಲೀಗ್‌ನ 2ನೇ(ಮೊದಲ ಅಧಿಕೃತ) ಆವೃತ್ತಿಯಲ್ಲಿ ಈ ಬಾರಿ ಭಾರತ ಒಟ್ಟು 8 ಆಟಗಾರರು ಪಾಲ್ಗೊಳ್ಳಲಿದ್ದಾರೆ. 

ಟಿ10 ಲೀಗ್ ಆಡಲಿದ್ದಾರೆ ಜಹೀರ್, ಆರ್.ಪಿ.ಸಿಂಗ್!

ಮಾಜಿ ವೇಗಿಗಳಾದ ಜಹೀರ್‌ ಖಾನ್‌, ಮುನಾಫ್‌ ಪಟೇಲ್‌ ಮತ್ತು ಪ್ರವೀಣ್‌ ಕುಮಾರ್‌ ಸೇರಿದಂತೆ ಎಸ್‌.ಬದರೀನಾಥ್‌, ರಿತೀಂದರ್‌ ಸಿಂಗ್‌ ಸೋಧಿ, ಪ್ರವೀಣ್‌ ತಾಂಬೆ, ಅಮಿತೋಜ್‌ ಸಿಂಗ್‌ ಹಾಗೂ ಆರ್‌.ಪಿ.ಸಿಂಗ್‌ ಪಾಲ್ಗೊಳ್ಳಲಿದ್ದಾರೆ. 12 ದಿನಗಳ ಟೂರ್ನಿಯಲ್ಲಿ ಒಟ್ಟು 8 ತಂಡಗಳಿದ್ದು, 29 ಪಂದ್ಯ ನಡೆಯಲಿವೆ.

ಮತ್ತೆ ಅಬ್ಬರಿಸಲು ರೆಡಿಯಾದ ವೀರೇಂದ್ರ ಸೆಹ್ವಾಗ್

ಜಹೀರ್ ಖಾನ್ ಬೆಂಗಾಲ್ ಟೈಗರ್ಸ್ ತಂಡವನ್ನು ಪ್ರತಿನಿಧಿಸಿದರೇ, ಪಂಜಾಬಿ ಲೆಜೆಂಡ್ಸ್ ಪರ ಪ್ರವೀಣ್ ಕುಮಾರ್ ಕಣಕ್ಕಿಳಿಯಲಿದ್ದಾರೆ. ಇನ್ನು ಎಸ್ ಬದರಿನಾಥ್ ಮರಾಠ ಅರೇಬಿಯನ್ಸ್ ಮತ್ತು ಕಳೆದ ಆವೃತ್ತಿಯ ಚಾಂಪಿಯನ್ ಕೇರಳ ಕಿಂಗ್ಸ್ ತಂಡ ರಿತೀಂದರ್‌ ಸಿಂಗ್‌ ಸೋಧಿಯನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಪ್ಯಾಕ್ತೋನ್ಸ್ ಪರ ಆರ್.ಪಿ ಸಿಂಗ್ ಕಣಕ್ಕಿಳಿಯಲಿದ್ದರೆ, ರಜಪೂತರ ಪರ ಮುನಾಫ್ ಬೌಲಿಂಗ್ ದಾಳಿ ನಡೆಸಲಿದ್ದಾರೆ. ಹೊಸ ತಂಡಗಳಾದ ಕರಾಚಿಯನ್ಸ್ ಪರ ಪ್ರವೀಣ್ ತಾಂಬೆ, ನಾರ್ಥನ್ ವಾರಿಯರ್ಸ್ ಪರ ಅಮಿತೋಜ್‌ ಸಿಂಗ್‌ ಆಡಲಿದ್ದಾರೆ.