ಮುಂಬೈ(ಮೇ.14): ವಿಶ್ವಕಪ್ ಟೂರ್ನಿಗೆ ಇನ್ನು ಕೆಲ ದಿನಗಳು  ಮಾತ್ರ ಬಾಕಿ. ಟೀಂ ಇಂಡಿಯಾ ಸೇರಿದಂತೆ ಎಲ್ಲಾ ತಂಡಗಳು ಪ್ರತಿಷ್ಠಿತ ಟೂರ್ನಿಗೆ ಸಜ್ಜಾಗುತ್ತಿದೆ. ಇತ್ತ ಅಭಿಮಾನಿಗಳು ಟೂರ್ನಿಗಾಗಿ ಕಾಯುತ್ತಿದ್ದಾರೆ. ಟೀಂ ಇಂಡಿಯಾಗೆ ಬಾಲಿವುಡ್‌ನಲ್ಲೂ ಅಭಿಮಾನಿಗಳಿದ್ದಾರೆ.  ಆದರೆ ಬಾಲಿವುಡ್ ಚಿತ್ರರಂಗ ಮಾತ್ರ  ವಿಶ್ವಕಪ್ ಟೂರ್ನಿಯಿಂದ ಆತಂಕಕ್ಕೆ ಒಳಗಾಗಿದೆ.  

ಇದನ್ನೂ ಓದಿ: ವಿಶ್ವಕಪ್’ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗಿದು ಗುಡ್ ನ್ಯೂಸ್..!

ಐಪಿಎಲ್ ಟೂರ್ನಿ ಮುಗಿದ ಬೆನ್ನಲ್ಲೇ ವಿಶ್ವಕಪ್ ಟೂರ್ನಿ ಬಂದಿರೋದು ಬಾಲಿವುಡ್‌ಗೆ ತೀವ್ರ ಹೊಡೆತ ಬಿದ್ದಿದೆ. ಕಾರಣ ಐಪಿಎಲ್ ಟೂರ್ನಿ ವೇಳೆ ಬಾಲಿವುಡ್ ಚಿತ್ರಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದು ಕಷ್ಟ. ಹೀಗಾಗಿ ಐಪಿಎಲ್ ವೇಳೆ ಹೆಚ್ಚಾಗಿ ಚಿತ್ರಗಳು ರಿಲೀಸ್ ಆಗುವುದಿಲ್ಲ. ಐಪಿಎಲ್ ಟೂರ್ನಿ ಮುಗಿದ ಬೆನ್ನಲ್ಲೇ ಚಿತ್ರ ಬಿಡುಗಡೆ ಮಾಡಲು ಮುಂದಾಗಿರುವ ಬಾಲಿವುಡ್‌ಗೆ ಇದೀಗ ವಿಶ್ವಕಪ್ ಟೂರ್ನಿ ಹೊಡೆತ ನೀಡಲಿದೆ.

ಇದನ್ನೂ ಓದಿ: ವಿಶ್ವಕಪ್ 2019: 80,000 ಭಾರತೀಯರು ಇಂಗ್ಲೆಂಡ್‌ಗೆ!

ಮೇ 30 ರಿಂದ ಜುಲೈ 14ರ ವರೆಗೆ ವಿಶ್ವಕಪ್ ಟೂರ್ನಿ ನಡೆಯಲಿದೆ. ಇದೇ ಅವದಿಯಲ್ಲಿ ಬಾಲಿವುಡ್ ಬಹುನಿರೀಕ್ಷಿತ ಚಿತ್ರಗಳಾದ ಭಾರತ್, ಕಬೀರ್ ಸಿಂಗ್, ಜಬ್ರಿಯಾ ಜೋಡಿ  ಚಿತ್ರಗಳು ಜೂನ್ 5, 21 ಹಾಗೂ 12 ರಂದು ಬಿಡುಗಡೆಯಾಗಲಿದೆ. ಸಲ್ಮಾನ್ ಖಾನ್ ಅಭಿನಯದ ಭಾರತ್ ಚಿತ್ರ ಬಿಡುಗಡೆ ದಿನ, ಟೀಂ ಇಂಡಿಯಾ ಹಾಗೂ ಸೌತ್ಆಫ್ರಿಕಾ ಪಂದ್ಯ ನಡೆಯಲಿದೆ.