Asianet Suvarna News Asianet Suvarna News

ಕ್ರಿಕೆಟ್ ಸೀಕ್ರೇಟ್ಸ್: ಸಚಿನ್-ಪಾಂಟಿಂಗ್-ಕರುಣ್'ನಾಯರ್ ಪಾಲಿಗೆ ಇಂದು ಮರೆಯಲಾರದ ದಿನ ಯಾಕೆ ಗೊತ್ತಾ..?

19-12 ಕ್ರಿಕೆಟ್'ನ ಇಂದಿನ ಸೀಕ್ರೇಟ್ಸ್ ನಿಮ್ಮ ಮುಂದೆ..

Cricket Secretes

19-12 ಕ್ರಿಕೆಟ್'ನ ಇಂದಿನ ಸೀಕ್ರೇಟ್ಸ್ ನಿಮ್ಮ ಮುಂದೆ..

* 2010ರ ಈ ದಿನ ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್'ನಲ್ಲಿ 50 ಶತಕ ಪೂರೈಸಿದ ಮೊದಲ ಹಾಗೂ ಏಕೈಕ ಬ್ಯಾಟ್ಸ್'ಮನ್ ಎನ್ನುವ ದಾಖಲೆ ಬರೆದಿದ್ದರು.

* ಕಳೆದ ವರ್ಷದ ಈ ದಿನ ಕನ್ನಡಿಗ ಕರುಣ್ ನಾಯರ್ ತ್ರಿಶತಕ ಸಾಧನೆ ಮಾಡಿದ್ದರು. ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ 303* ರನ್ ಸಿಡಿಸುವ ಮೂಲಕ ಈ ಸಾಧನೆ ಮಾಡಿದ ಎರಡನೇ ಭಾರತೀಯ ಕ್ರಿಕೆಟಿಗ ಎನ್ನುವ ಗೌರವಕ್ಕೆ ಭಾಜನರಾಗಿದ್ದರು.

* ಆಸೀಸ್ ಕ್ರಿಕೆಟ್ ದಿಗ್ಗಜ ರಿಕಿ ಪಾಂಟಿಂಗ್ ಇಂದು 43ನೇ ವಸಂತಕ್ಕೆ ಕಾಲಿರಿಸಿದರು. ಆಸ್ಟ್ರೇಲಿಯಾ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕ. ಅಂತರಾಷ್ಟ್ರೀಯ ಕ್ರಿಕೆಟ್'ನಲ್ಲಿ 27,483 ರನ್ 71 ಶತಕ, 108 ಟೆಸ್ಟ್ ಪಂದ್ಯದಲ್ಲಿ ಗೆಲುವಿನ ರುಚಿ ಕಂಡಿರುವ ಏಕೈಕ ಕ್ರಿಕೆಟಿಗ, 3 ವಿಶ್ವಕಪ್(1999, 2003&2007) ಚಾಂಪಿಯನ್ ತಂಡದ ಭಾಗವಾಗಿದ್ದು ರಿಕಿ ಪಾಂಟಿಂಗ್ ಹೆಗ್ಗಳಿಕೆ.

Follow Us:
Download App:
  • android
  • ios