ಫೋಸ್ಟರ್ ನಿರ್ಮಿಸಿದ ಈ ದಾಖಲೆ ಇಂದಿಗೆ 113 ವಸಂತಗಳನ್ನು ಕಳೆದಿದೆ. ಆದರೂ ಯಾವೊಬ್ಬ ಆಟಗಾರನು ಈ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ.
ಲಂಡನ್(ಡಿ.14): ವಿಶ್ವ ಕ್ರಿಕೆಟ್‌ನಲ್ಲಿ ದಾಖಲಾದ ಕೆಲವೊಂದು ರೆಕಾರ್ಡ್‌ಗಳು ಶತಮಾನಗಳಾದರೂ ಬ್ರೇಕ್ ಮಾಡಲು ಅಸಾಧ್ಯ ಎನಿಸಿವೆ. ಅಂತಹುದೇ ದಾಖಲೆಯೊಂದು ಕಳೆದ 113 ವರ್ಷಗಳಿಂದ ಹಾಗೆ ಉಳಿದಿದೆ. ಇಂಗ್ಲೆಂಡ್ ಕ್ರಿಕೆಟಿಗ ಟಿಪ್ ಫೋಸ್ಟರ್ 1903 ಡಿ. 14ರಂದು ನಡೆದ ಮೊದಲ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಎದುರು ಪದಾರ್ಪಣೆ ಪಂದ್ಯದಲ್ಲಿ 287 ರನ್‌ಗಳಿಸಿದ್ದರು.
ಫೋಸ್ಟರ್ ನಿರ್ಮಿಸಿದ ಈ ದಾಖಲೆ ಇಂದಿಗೆ 113 ವಸಂತಗಳನ್ನು ಕಳೆದಿದೆ. ಆದರೂ ಯಾವೊಬ್ಬ ಆಟಗಾರನು ಈ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ.
ಸಿಡ್ನಿ ಮೈದಾನದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್'ಗೆ ಇಳಿದಿದ್ದ ಫೋಸ್ಟರ್ 37 ಬೌಂಡರಿಯೊಂದಿಗೆ ದ್ವಿಶತಕಗಳಿಸಿದ್ದರು. ಇಂಗ್ಲೆಂಡ್ ಈ ಪಂದ್ಯವನ್ನು 5 ವಿಕೆಟ್‌ಗಳಿಂದ ಜಯಿಸಿತ್ತು.
ಪಾದಾರ್ಪಣಾ ಪಂದ್ಯದಲ್ಲಿ ಗರಿಷ್ಠ ರನ್'ಗಳಿಸಿದವರ ಪಟ್ಟಿ ಇಂತಿದೆ
ಆಟಗಾರರನ್ಎದುರಾಳಿವರ್ಷ
ಟಿಫ್ ಫೋಸ್ಟರ್(ENG) 287 ಆಸ್ಟ್ರೇಲಿಯಾ 1903
ಜಾಕ್ ರುಡಾಲ್ಫ್(SA) 222* ಬಾಂಗ್ಲಾದೇಶ 2003
ಲಾರೆನ್ಸ್ ರೋ (WI) 214 ನ್ಯೂಜಿಲ್ಯಾಂಡ್ 1972
ಮ್ಯಾಥ್ಯೂ ಸಿಂಕ್ಲೆರ್(NZ) 214 ವೆಸ್ಟ್'ಇಂಡೀಸ್ 1999
ಬ್ರೆಂಡನ್ ಕುರೇಪು(SL) 201* ನ್ಯೂಜಿಲ್ಯಾಂಡ್ 1987
ಶಿಖರ್ ಧವನ್(IND) 187 ಆಸ್ಟ್ರೇಲಿಯಾ 2013
