Asianet Suvarna News Asianet Suvarna News

ಇದು ಅಪರೂಪದಲ್ಲೇ ಅಪರೂಪ: ಶೂನ್ಯಕ್ಕೆ ಡಿಕ್ಲೇರ್ ಮಾಡಿ ಪಂದ್ಯ ಸೋತ ತಂಡ..!

4 ದಿನಗಳ ಪಂದ್ಯದ ಮೊದಲ ದಿನ ಸೆಂಟ್ರಲ್ ಸ್ಟಾಗ್ಸ್ 7 ವಿಕೆಟ್ ನಷ್ಟಕ್ಕೆ 301 ರನ್ ಗಳಿಸಿತ್ತು. ಮಳೆಯಿಂದಾಗಿ 2 ಹಾಗೂ 3ನೇ ದಿನ ರದ್ದಾದ ಕಾರಣ, 4 ದಿನ ಎರಡೂ ತಂಡಗಳು ಫಲಿತಾಂಶಕ್ಕಾಗಿ ಸೆಣಸಿದವು.

Cricket Rare Double 0 for 0 Declaration in New Zealand Plunket Shield
Author
Nelson, First Published Oct 14, 2018, 5:17 PM IST
  • Facebook
  • Twitter
  • Whatsapp

ನೆಲ್ಸನ್[ಅ.14]: ನ್ಯೂಜಿಲೆಂಡ್‌ನ ದೇಸಿ ಟೂರ್ನಿ ಪ್ಲೆಂಕೆಟ್ ಶೀಲ್ಡ್‌ನಲ್ಲಿ ಸೆಂಟ್ರಲ್ ಸ್ಟಾಗ್ಸ್ ಹಾಗೂ ಕ್ಯಾಂಟರ್‌’ಬರ್ರಿ ತಂಡಗಳು ತಮ್ಮ ಇನ್ನಿಂಗ್ಸ್’ಗಳನ್ನು ೦ಗೆ ಡಿಕ್ಲೇರ್ ಮಾಡಿಕೊಂಡ ಅಪರೂಪದ ಪ್ರಸಂಗ ನಡೆದಿದೆ.

4 ದಿನಗಳ ಪಂದ್ಯದ ಮೊದಲ ದಿನ ಸೆಂಟ್ರಲ್ ಸ್ಟಾಗ್ಸ್ 7 ವಿಕೆಟ್ ನಷ್ಟಕ್ಕೆ 301 ರನ್ ಗಳಿಸಿತ್ತು. ಮಳೆಯಿಂದಾಗಿ 2 ಹಾಗೂ 3ನೇ ದಿನ ರದ್ದಾದ ಕಾರಣ, 4 ದಿನ ಎರಡೂ ತಂಡಗಳು ಫಲಿತಾಂಶಕ್ಕಾಗಿ ಸೆಣಸಿದವು.

4ನೇ ಹಾಗೂ ಅಂತಿಮ ದಿನವಾದ ಶನಿವಾರ, ಸ್ಟಾಗ್ಸ್ ತಂಡ 7 ವಿಕೆಟ್’ಗೆ 352 ರನ್ ಗಳಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಬಳಿಕ ಕ್ಯಾಂಟರ್‌’ಬರ್ರಿ ಮೊದಲ ಇನ್ನಿಂಗ್ಸ್ ಆರಂಭಿಸದಯೇ ಡಿಕ್ಲೇರ್ ಮಾಡಿದ್ದರಿಂದ, ಸ್ಟಾಗ್ಸ್ ಸಹ ೦ ರನ್‌ಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಗೆಲುವಿಗೆ 89 ಓವರ್‌ಗಳಲ್ಲಿ 353 ರನ್ ಗುರಿ ಪಡೆದ ಕ್ಯಾಂಟರ್‌ಬರ್ರಿ 88 ಓವರ್‌ಗಳಲ್ಲಿ 207 ರನ್‌ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.

Follow Us:
Download App:
  • android
  • ios