ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಪರ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ ಪೃಥ್ವಿ ಶಾ, ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸಿ ಗಮನ ಸೆಳೆದರು. ಪೃಥ್ವಿ ಆಡಿದ 2 ಪಂದ್ಯದಲ್ಲಿ ಇದುವರೆಗೆ 234 ರನ್ ಬಾರಿಸಿದ್ದಾರೆ.
ಮುಂಬೈ[ನ.09]: ಭಾರತ ಕ್ರಿಕೆಟ್’ನ ಯುವ ಪ್ರತಿಭಾನ್ವಿತ ಕ್ರಿಕೆಟಿಗ ಪೃಥ್ವಿ ಶಾ ಇಂದು 19ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಚಾಂಪಿಯನ್ ಪಟ್ಟಕ್ಕೇರಿಸಿದ ಪೃಥ್ವಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಪೃಥ್ವಿ ಶಾ ಸ್ಫೋಟಕ ಬ್ಯಾಟಿಂಗ್- ಸೆಹ್ವಾಗ್‌ಗೆ ಹೋಲಿಸಿದ ಟ್ವಿಟರಿಗರು!
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಪರ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ ಪೃಥ್ವಿ ಶಾ, ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸಿ ಗಮನ ಸೆಳೆದರು. ಪೃಥ್ವಿ ಆಡಿದ 2 ಪಂದ್ಯದಲ್ಲಿ ಇದುವರೆಗೆ 234 ರನ್ ಬಾರಿಸಿದ್ದಾರೆ. ಚೊಚ್ಚಲ ಪಂದ್ಯದಲ್ಲಿ ಪೃಥ್ವಿ ಶತಕ ಸಿಡಿಸುವುದು ಹೊಸತೇನಲ್ಲ. ಮುಂಬೈ ತಂಡದ ಪ್ರತಿಭಾನ್ವಿತ ಕ್ರಿಕೆಟಿಗ ಶಾ, ಪ್ರಥಮ ದರ್ಜೆ, ದುಲೀಪ್, ರಣಜಿ ಕ್ರಿಕೆಟ್’ನ ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ ಆಟಗಾರ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.
'ಪೃಥ್ವಿ ಶಾಗಿರುವಷ್ಟು ಪ್ರಬುದ್ಧತೆ ನಮಗಿರಲಿಲ್ಲ'-ವಿರಾಟ್ ಕೊಹ್ಲಿ!
ಪೃಥ್ವಿ ಶಾ ಹುಟ್ಟುಹಬ್ಬಕ್ಕೆ ದಿಗ್ಗಜರು ಶುಭಕೋರಿದ್ದು ಹೀಗೆ...
