Asianet Suvarna News Asianet Suvarna News

ಯುವಕರಿಗೆ ನಾಲ್ಕೈದು ಅವಕಾಶಗಳಷ್ಟೇ..!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಯುವ ಕ್ರಿಕೆಟಿಗರಿಗೆ ಕಿವಿ ಮಾತೊಂದನ್ನು ಹೇಳಿದ್ದು, ಸಿಕ್ಕ ನಾಲ್ಕೈದು ಅವಕಾಶಗಳಲ್ಲೇ ತಮ್ಮ ಪ್ರತಿಭೆಗಳನ್ನು ಸಾಬೀತು ಪಡಿಸಬೇಕು ಎಂದು ಹೇಳಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

Cricket Players should prove themselves before T20 World Cup Says Virat Kohli
Author
Dharamshala, First Published Sep 16, 2019, 12:33 PM IST

ಧರ್ಮ​ಶಾ​ಲಾ[ಸೆ.16]: ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, 2020ರ ಟಿ20 ವಿಶ್ವ​ಕಪ್‌ಗೆ ತಂಡದ ಯೋಜನೆಗಳ ಬಗ್ಗೆ ಸುಳಿವು ನೀಡಿದ್ದು, ವಿಶ್ವ​ಕಪ್‌ ತಂಡ​ದಲ್ಲಿ ಸ್ಥಾನ ಪಡೆ​ಯ​ಬೇ​ಕಿ​ದ್ದರೆ ಸಿಗುವ 4ರಿಂದ 5 ಅವ​ಕಾ​ಶಗಳಲ್ಲಿ ಗಮನ ಸೆಳೆ​ಯ​ಬೇಕು ಎಂದಿ​ದ್ದಾರೆ.

ಕೋಟ್ಲಾ ಈಗ ಜೇಟ್ಲಿ ಕ್ರೀಡಾಂಗಣ; ಸಮಾರಂಭದಲ್ಲಿ ಕೊಹ್ಲಿ, ಅಮಿತ್ ಶಾ!

ತಮ್ಮದೇ ಉದಾ​ಹ​ರಣೆ ನೀಡಿ​ರುವ ಕೊಹ್ಲಿ, ತಾವು 2008ರಲ್ಲಿ ಭಾರತ ತಂಡಕ್ಕೆ ಕಾಲಿ​ಟ್ಟಾಗ ಹೆಚ್ಚಿನ ಅವ​ಕಾಶಗಳನ್ನು ನಿರೀಕ್ಷೆ ಮಾಡಿರ​ಲಿಲ್ಲ. ಅದೇ ಮನ​ಸ್ಥಿ​ತಿ​ಯನ್ನು ಯುವ ಆಟ​ಗಾ​ರರೂ ಹೊಂದಿ​ರ​ಬೇಕು ಎಂದಿ​ದ್ದಾರೆ. ‘ಟಿ20 ವಿಶ್ವ​ಕಪ್‌ಗೂ ಮುನ್ನ ಹೆಚ್ಚೆಂದೆರೆ ನಮಗೆ 30 ಪಂದ್ಯ​ಗಳು ಸಿಗ​ಲಿವೆ. ತಂಡ ತನ್ನ ಉದ್ದೇಶಗಳ ಬಗ್ಗೆ ಸ್ಪಷ್ಟ ನಿಲುವು ಹೊಂದಿದೆ. ಆಟ​ಗಾ​ರ​ರಿಗೆ 4ರಿಂದ 5 ಅವ​ಕಾಶಗಳು ಸಿಗ​ಲಿದ್ದು, ಅದರ ಸದ್ಬ​ಳಕೆ ಮಾಡಿ​ಕೊ​ಳ್ಳ​ಬೇ​ಕಿದೆ. ಆ ಮಟ್ಟದ ಆಟವನ್ನು ನಾವು ಆಡು​ತ್ತಿ​ದ್ದೇವೆ’ ಎಂದು ಕೊಹ್ಲಿ ಹೇಳಿ​ದ್ದಾರೆ.

ಕೊಹ್ಲಿ-ಸ್ಮಿತ್ ಇಬ್ಬರಲ್ಲಿ ಯಾರು ಬೆಸ್ಟ್..?

‘ತಂಡದಲ್ಲಿ ಸ್ಥಾನ ಪಡೆ​ಯುವ ಆಟ​ಗಾ​ರರ ಮನ​ಸ್ಥಿತಿ ಸದೃಢ​ವಾ​ಗಿ​ರ​ಬೇ​ಕಿದೆ. ಯಾರು ಅವ​ಕಾಶಗಳನ್ನು ಸರಿ​ಯಾಗಿ ಉಪ​ಯೋ​ಗಿ​ಸಿ​ಕೊ​ಳ್ಳು​ತ್ತಾರೋ ಅವರು ತಂಡ​ದಲ್ಲಿ ಮುಂದು​ವ​ರಿ​ಯು​ತ್ತಾರೆ. ಏಕೆಂದರೆ ನಮಗೆ ಹೆಚ್ಚಿನ ಸಮ​ಯ​ವಿ​ಲ್ಲ’ ಎಂದು ಕೊಹ್ಲಿ ಆಟ​ಗಾ​ರ​ರಿಗೆ ಸಂದೇಶ ರವಾ​ನಿ​ಸಿ​ದ್ದಾರೆ. ಟಿ20 ವಿಶ್ವ​ಕಪ್‌ ಜತೆಗೆ ಭಾರತ ತಂಡ ವಿಶ್ವ ಟೆಸ್ಟ್‌ ಚಾಂಪಿ​ಯನ್‌ಶಿಪ್‌ ಕಡೆಗೂ ಗಮನ ಹರಿ​ಸು​ತ್ತಿ​ರು​ವು​ದಾಗಿ ಕೊಹ್ಲಿ ಹೇಳಿ​ದ್ದಾರೆ.

ವೆಸ್ಟ್‌ಇಂಡೀಸ್‌ ಪ್ರವಾಸದಿಂದಲೇ ಭಾರತ ತಂಡ ಹಲವು ಪ್ರಯೋಗಗಳನ್ನು ಮಾಡು​ತ್ತಿದೆ. ಕೆಲ ಹೊಸ ಪ್ರತಿಭೆಗಳಿಗೆ ತಂಡ​ದಲ್ಲಿ ಸ್ಥಾನ ನೀಡ​ಲಾ​ಗಿದೆ.
 

Follow Us:
Download App:
  • android
  • ios