ಅಬುದಾಬಿ[ನ.06]: ಪಾಕಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ 3-0 ಅಂತರದಲ್ಲಿ ಮುಖಭಂಗ ಅನುಭವಿಸಿರುವ ನ್ಯೂಜಿಲೆಂಡ್ ತಂಡ ಇದೀಗ ಏಕದಿನ ಸರಣಿಯಾಡಲು ಸಜ್ಜಾಗಿದ್ದು, 3 ಪಂದ್ಯಗಳ ಏಕದಿನ ಸರಣಿಗೆ 15 ಆಟಗಾರರನ್ನೊಳಗೊಂಡ ಬಲಿಷ್ಠ ತಂಡವನ್ನು ಕಿವೀಸ್ ಪ್ರಕಟಿಸಿದೆ.

ಇದೇ ಬುಧವಾರ[ನ.7]ದಿಂದ ಅಬುದಾಬಿಯ ಶೇಖ್ ಜಾಯೆದ್ ಮೈದಾನದಲ್ಲಿ ಆರಂಭವಾಗಲಿರುವ ಏಕದಿನ ಸರಣಿಗೆ ತಂಡವನ್ನು ಪ್ರಕಟಿಸಲಾಗಿದ್ದು, ಕೇನ್ ವಿಲಿಯಮ್ಸನ್ ತಂಡವನ್ನು ಮುನ್ನಡೆಸಲಿದ್ದಾರೆ.

ಟಿ20 ಸರಣಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ ಮಹರಾಷ್ಟ್ರ ಮೂಲದ ಎಡಗೈ ಸ್ಪಿನ್ನರ್ ಅಜಾಜ್ ಪಟೇಲ್ ಏಕದಿನ ತಂಡದಲ್ಲೂ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆಲ್ರೌಂಡರ್ ಕಾಲಿನ್ ಡಿ ಗ್ರಾಂಡ್’ಹೋಂ, ಅನುಭವಿ ಬ್ಯಾಟ್ಸ್’ಮನ್ ರಾಸ್ ಟೇಲರ್ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.

ಹೀಗಿದೆ ನ್ಯೂಜಿಲೆಂಡ್ ತಂಡ:

ಕೇನ್ ವಿಲಿಯಮ್ಸನ್[ನಾಯಕ], ಟೋಡ್ ಆ್ಯಶ್ಲೆ, ಟ್ರೆಂಟ್ ಬೌಲ್ಟ್, ಕಾಲಿನ್ ಡಿ ಗ್ರಾಂಡ್’ಹೋಂ, ಲೂಕಿ ಫರ್ಗ್ಯೂಸನ್, ಮ್ಯಾಟ್ ಹೆನ್ರಿ, ಟಾಮ್ ಲಾಥಮ್, ಕಾಲಿನ್ ಮನ್ರೋ, ಹೆನ್ರಿ ನಿಕೊಲೋಸ್, ಅಜಾಜ್ ಪಟೇಲ್, ಇಶ್ ಸೋಧಿ, ಟಿಮ್ ಸೌಥಿ, ರಾಸ್ ಟೇಲರ್, ಬಿಜೆ ವಾಟ್ಲಿಂಗ್, ಜಾರ್ಜ್ ವರ್ಕರ್