‘ತಂಡ ವಿದೇಶ ಪ್ರವಾಸಗಳಲ್ಲಿ ಶ್ರೇಷ್ಠವೋ ಇಲ್ಲವೋ ಎಂದು ಜನ ನಿರ್ಧರಿಸಲಿ’ ಎಂದು ಹೇಳಿದೆ ಎಂದು ಬಿಸಿಸಿಐ ಹಿರಿಯ ಅಧಿಕಾರಿ ಬಹಿರಂಗಪಡಿಸಿದ್ದಾರೆ. 

ನವದೆಹಲಿ(ನ.09): ‘ಕಳೆದ 15 ವರ್ಷಗಳಲ್ಲಿ ಇದು ಭಾರತದ ಶ್ರೇಷ್ಠ ತಂಡ. ವಿದೇಶ ಪ್ರವಾಸಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ತಂಡ’ ಎಂದು ಭಾರತ ತಂಡದ ಪ್ರಧಾನ ಕೋಚ್‌ ರವಿಶಾಸ್ತ್ರಿ ಇತ್ತೀಚೆಗಷ್ಟೇ ಹೇಳಿದ್ದರು. 

ನನಗೆ ವಾಂತಿ ಬರುತ್ತಿದೆ ಎಂದ ರವಿಶಾಸ್ತ್ರಿ..! ಟೀಂ ಇಂಡಿಯಾ ಕೋಚ್ ಫುಲ್ ಟ್ರೋಲ್

ಶಾಸ್ತ್ರಿಯ ಅಭಿಪ್ರಾಯವನ್ನು ಪರಿಗಣಿಸದ ಸುಪ್ರೀಂ ಕೋರ್ಟ್‌ ನೇಮಿತ ಬಿಸಿಸಿಐ ಆಡಳಿತ ಸಮಿತಿ ‘ತಂಡ ವಿದೇಶ ಪ್ರವಾಸಗಳಲ್ಲಿ ಶ್ರೇಷ್ಠವೋ ಇಲ್ಲವೋ ಎಂದು ಜನ ನಿರ್ಧರಿಸಲಿ’ ಎಂದು ಹೇಳಿದೆ ಎಂದು ಬಿಸಿಸಿಐ ಹಿರಿಯ ಅಧಿಕಾರಿ ಬಹಿರಂಗಪಡಿಸಿದ್ದಾರೆ. 

ಟೀಂ ಇಂಡಿಯಾ ಬಿಟ್ಟು ಲೋಕಲ್ ಟ್ರೈನ್ ಹತ್ತಿದ ರವಿ ಶಾಸ್ತ್ರಿ!

ಆಡಳಿತ ಸಮಿತಿ ಜತೆ ಸಭೆಯಲ್ಲಿ ತಮ್ಮ ಮಾರ್ಗದರ್ಶನದ ತಂಡದ ಬಗ್ಗೆ ಅತಿಯಾದ ಹೊಗಳಿಕೆಯ ಮಾತುಗಳನ್ನಾಡುತ್ತಿದ್ದ ಶಾಸ್ತ್ರಿಯನ್ನು ತಡೆದ ಆಡಳಿತ ಸಮಿತಿ ಸದಸ್ಯರೊಬ್ಬರು, ‘ಆಸ್ಪ್ರೇಲಿಯಾ ಪ್ರವಾಸದ ಬಗ್ಗೆ ಮಾತನಾಡೋಣ. ತಂಡ ಶ್ರೇಷ್ಠವೋ ಇಲ್ಲವೋ ಎಂದು ನೀವು ನಿರ್ಧರಿಸುವುದು ಬೇಡ, ಜನ ಹೇಳಲಿ’ ಎಂದರು ಎನ್ನಲಾಗಿದೆ.

ಇಂಗ್ಲೆಂಡ್ ಪ್ರವಾಸದ ವೇಳೆ ಟೀಂ ಇಂಡಿಯಾ ಆಂಗ್ಲರೆದುರು 3-1 ಅಂತರದಲ್ಲಿ ಟೆಸ್ಟ್ ಸರಣಿ ಸೋತು ವ್ಯಾಪಕ ಟೀಕೆಗೆ ಗುರಿಯಾಗಿತ್ತು.