ಅಬುದಾಬಿ[ನ.03]: ಅದ್ಭುತ ಬ್ಯಾಟಿಂಗ್, ಚಾಣಾಕ್ಷಾ ನಾಯಕತ್ವದ ಮೂಲಕ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿರುವ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಫಿಲ್ಡಿಂಗ್’ನಲ್ಲೂ ಕೂಡಾ ಮಿಂಚುತ್ತಿದ್ದಾರೆ.

ಪಾಕಿಸ್ತಾನ-ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಹಿಡಿದ ಕ್ಯಾಚ್ ಇದೀಗ ವೈರಲ್ ಆಗುತ್ತಿದೆ. ಪಂದ್ಯದ 5ನೇ ಓವರ್’ನಲ್ಲಿ ಫಖರ್ ಜಮಾನ್ ಬಾರಿಸಿದ ಚೆಂಡನ್ನು  ಅದ್ಭುತವಾಗಿ ಒಂದೇ ಕೈನಲ್ಲಿ ಕ್ಯಾಚ್ ಪಡೆಯುವ ಮೂಲಕ ಪಾಕ್ ಬ್ಯಾಟ್ಸ್’ಮನ್’ಗಳನ್ನು ತಬ್ಬಿಬ್ಬು ಮಾಡುವಲ್ಲಿ ವಿಲಿಯಮ್ಸನ್ ಯಶಸ್ವಿಯಾದರು.

ಹೀಗಿತ್ತು ಆ ಅದ್ಭುತ ಕ್ಯಾಚ್:

ಟಿ20 ಕ್ರಿಕೆಟ್’ನಲ್ಲಿ ಪಾಕಿಸ್ತಾನದ ಗೆಲುವಿನ ನಾಗಾಲೋಟ ಮುಂದುವರೆದಿದ್ದು, ಸತತ 11ನೇ ಟಿ20 ಸರಣಿ ಜಯಿಸಿದ ಸಾಧನೆ ಮಾಡಿದೆ. ಐಸಿಸಿ ಟಿ20 ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿರುವ ಪಾಕಿಸ್ತಾನದ ಅಜೇಯ ಗೆಲುವಿನ ದಾಖಲೆಗೆ ಇನ್ನೂ ಬ್ರೇಕ್ ಬಿದ್ದಿಲ್ಲ.